ಕನ್ನಡಿಗರನ್ನು ನಕ್ಕು ನಲಿಯುವಂತೆ ಮಾಡಿದ್ದ ಕಲರ್ಸ್‌ ಸೂಪರ್ ವಾಹಿನಿಯ ‘ಮಜಾ ಭಾರತ’ ತನ್ನ ಎರಡು ಸೀಸನ್‌ಗಳನ್ನು ಮುಗಿಸಿ ಈಗ ಮೂರನೇ ಸೀಸನ್ ಮೂಲಕ ಮತ್ತೆ ಕಿರುತೆರೆಯಲ್ಲಿ ಬರಲು ತಯಾರಿ ನಡೆಸುತ್ತಿದೆ. 

ಹೊಸ ಕಲಾವಿದರು, ಗ್ರಾಮೀಣ ಪ್ರತಿಭೆಗಳಿಗೆ ಹೆಚ್ಚು ಅವಕಾಶ ನೀಡಿ, ಅವರ ಪ್ರತಿಭೆಯನ್ನು ಹೆಕ್ಕಿ ಕನ್ನಡಿಗರ ಮುಂದಿಟ್ಟಿದ್ದ ಮಜಾಭಾರತ ಈಗ ಮತ್ತೆ ಕರ್ನಾಟಕದಾದ್ಯಂತ ಮೂರನೇ ಸೀಸನ್ಗೆ ಪ್ರತಿಭೆಗಳ ಹುಡುಕಾಟ ಶುರು ಮಾಡಿದೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಅದಕ್ಕಾಗಿ ರಾಜ್ಯಾದ್ಯಂತ ಈ ಬಾರಿ 12 ಕಡೆಗಳಲ್ಲಿ ಆಡಿಷನ್‌ಗೆ ಸಿದ್ಧತೆ ಮಾಡಿಕೊಂಡಿದ್ದು ಡಿ.15ರಂದು ಬಿಜಾಪುರದಲ್ಲಿ ಆಡಿಷನ್ ಶುರುವಾಗಲಿದೆ. ನಂತರ ಹನ್ನೊಂದು ದಿನಗಳ ಕಾಲ ಕ್ರಮವಾಗಿ ಡಿ. 16ಕ್ಕೆ ಬಾಗಲಕೋಟೆಯಲ್ಲಿ, ಡಿ. 17ರಂದು ಧಾರವಾಡ, ಡಿ. 18ಕ್ಕೆ ಬಳ್ಳಾರಿ, ಡಿ. 19ಕ್ಕೆ ದಾವಣಗೆರೆ, ಡಿ. 20ಕ್ಕೆ ಚಿತ್ರದುರ್ಗ, ಡಿ. 21 ಶಿವಮೊಗ್ಗ, ಡಿ. 22 ಕುಂದಾಪುರ, ಡಿ. 23 ಮಂಗಳೂರು, ಡಿ. 25 ಮೈಸೂರು, ಡಿ. 26 ಮಂಡ್ಯ, ಡಿ. 29ರಂದು ಬೆಂಗಳೂರಿನಲ್ಲಿ ಆಡಿಷನ್ ನಡೆಯಲಿದೆ.