ಕಿರುತೆರೆಯ ಕೆಲವು ರಿಯಾಲಿಟಿ ಶೋಗಳು ವೀಕ್ಷಕರ ಹೃದಯ ಗೆದ್ದರೆ, ಮತ್ತೆ ಕೆಲವು ನಗದು ಗೆಲ್ಲುವಂತೆ ಮಾಡಿವೆ. ಅಂಥವುಗಳಲ್ಲಿ ಒಂದು ಸೂಪರ್ ಮಿನಿಟ್ ಮತ್ತೆ ಕಿರುತೆರೆಯಲ್ಲಿ ರಾರಾಜಿಸಲಿದೆ.

ಕಿರುತೆರೆಯ ಪ್ರಖ್ಯಾತ ಗೇಮ್ ಶೋ ಮಿನಿಟ್ ವೇಸ್ಟ್ ಮಾಡದೆ ಮಿನಿಟ್‌ನಲ್ಲಿ ಲಕ್ಷ ಗೆಲ್ಲೋ ಆಟ ಸೂಪರ್ ಮಿನಿಟ್ ಮತ್ತೆ ಸೆ.29 ರಿಂದ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಲಿದೆ. ಇಗಾಗಲೆ 3 ಸೀಸನ್‌ಗಳಲ್ಲಿ ಹಲವಾರು ಗಣ್ಯರು ಮತ್ತು ಸಾಮಾನ್ಯರು ಭಾಗವಹಿಸಿ, ನಿಮಿಷದಲ್ಲಿ ಲಕ್ಷ ಗೆದ್ದಿದ್ದಲ್ಲದೇ, ಮಿನಿಟ್ ಮಹತ್ವವನ್ನೂ ಅರಿತುಕೊಂಡಿದ್ದಾರೆ. ಇಗ ಮತ್ತೆ ಅದೇ ಸಾಲಿನಲ್ಲಿ ನೀವು ಸೆರಬೇಕಾ? ಹಾಗಾದರೆ ಮಿಸ್ ಮಾಡಿ ಕೊಳ್ಳಬೇಡಿ.......

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಗೋಲ್ಡನ್ ಸ್ಟಾರ್ ಗಣೇಶ್ ಈ ಕಾರ್ಯಕ್ರಮದ ನಿರೂಪಕರಾಗಲಿದ್ದಾರೆ. ಆಯ್ಕೆ ಪ್ರಕ್ರಿಯೆ ಕರ್ನಾಟಕದ ಎಲ್ಲ ಜಿಲ್ಲೆಗಳಲ್ಲಿಯೂ ನಡೆಯಲಿದೆ. ಹಿಂದೆ ಗೆದ್ದವರಲ್ಲಿ ಕೆಲವರು ಈ ಹಣವನ್ನು ಮನೆಗೆ ಕೊಂಡೊಯ್ದಿದ್ದರೆ, ಮತ್ತೆ ಕೆಲವರು ದಾನ ಧರ್ಮಕ್ಕೆಂದು ಕೈ ಎತ್ತಿ ಕೊಟ್ಟಿದ್ದಾರೆ. ಒಟ್ಟಿನಲ್ಲಿ ಲಕ್ಷ ಗೆಲ್ಲೋ ಅವಕಾಶವಿದೆ.