ಈ ಬಾರಿಯ ಸ್ಪರ್ಧಿಗಳಲ್ಲಿ ಸಾಕಷ್ಟುಬದಲಾವಣೆಗಳನ್ನು ಮಾಡಿಕೊಂಡಿದ್ದಾರೆ. ಹಿಂದಿನಂತೆ ಬೇರೆ ಬೇರೆ ವಲಯ- ವರ್ಗದ ಸ್ಪರ್ಧಿಗಳು ಇಲ್ಲಿ ಇರಲ್ಲ. ಕೇವಲ ಸೆಲೆಬ್ರಿಟಿಗಳು ಮಾತ್ರ ಈ ಬಾರಿ ಬಿಗ್‌ಬಾಸ್‌ ಮನೆ ಪ್ರವೇಶಿಸಲಿದ್ದಾರೆ. ಅಂದರೆ 15ಕ್ಕೆ 15 ಮಂದಿಯೂ ಸೆಲೆಬ್ರಿಟಿಗಳಾಗಿರುತ್ತಾರೆ.

ಇನ್ನೂ ಈ ಶೋ ಕಲರ್ಸ್‌ ಸೂಪರ್‌ ವಾಹಿನಿಯ ಬದಲಾಗಿ ಕಲರ್ಸ್‌ ಕನ್ನಡ ವಾಹಿನಿಯಲ್ಲೇ ಪ್ರಸಾರವಾಗಲಿದೆ. ಈಗಾಗಲೇ ಬಿಗ್‌ಬಾಸ್‌ನ ಪ್ರೋಮೋ ಶೂಟ್‌ ಆಗಿದ್ದು, ಸೆ.13ಕ್ಕೆ ಪ್ರೋಮೋ ಬಿಡುಗಡೆ ಆಗಲಿದೆ. ಎಲ್ಲವೂ ಅಂದುಕೊಂಡಂತೆ ಆದರೆ ಅಕ್ಟೋಬರ್‌ 20ರಿಂದ ಬಿಗ್‌ಬಾಸ್‌ ರಿಯಾಲಿಟಿ ಶೋ ಪ್ರಸಾರಗೊಳ್ಳಲಿದೆ.

ಈ ವಾಹಿನಿಯಲ್ಲಿ ಕನ್ನಡದ ಬಿಗ್ ಬಾಸ್‌ ಬರಲ್ಲ, ಯಾವುದರಲ್ಲಿ ಪ್ರಸಾರ?