ಮುಂಬೈ: ನಟಿ ತನುಶ್ರೀ ದತ್ತಾ ದಾಖಲಿಸಿದ್ದ ಲೈಂಗಿಕ ಕಿರುಕುಳ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಿವುಡ್‌ ನಟ ನಾನಾ ಪಾಟೇಕರ್‌ ನಿರಾಳರಾಗಿದ್ದಾರೆ. ನಾನಾ ಪಾಟೇಕರ್‌ ಅವರನ್ನು ವಿಚಾರಣೆ ನಡೆಸಲು ಯಾವುದೇ ಸಾಕ್ಷ್ಯಾಧಾರಗಳಿಲ್ಲ ಎಂದು ಮುಂಬೈ ಪೊಲೀಸರು ಇಲ್ಲಿನ ಸ್ಥಳೀಯ ಕೋರ್ಟ್‌ಗೆ ವರದಿ ಸಲ್ಲಿಸಿದ್ದಾರೆ.

#MeToo ನಂತರ ಸಂಗೀತಾ ಭಟ್ ಫೋಟೋ ರಿವೀಲ್

ಪ್ರಕರಣಕ್ಕೆ ಸಂಬಂಧಿಸಿದಂತೆ ಅಂಧೇರಿಯಲ್ಲಿರುವ ಮೆಟ್ರೋಪಾಲಿಟನ್‌ ಮ್ಯಾಜಿಸ್ಪ್ರೇಟ್‌ ಅವರಿಗೆ ಒಶಿವಾರಾ ಪೊಲೀಸರು ಬುಧವಾರ ‘ಬಿ ಸಾರಾಂಶ’ ವರದಿ ಸಲ್ಲಿಸಿದ್ದಾರೆ. ಹೀಗಾಗಿ ಪ್ರಕರಣವನ್ನು ಕೋರ್ಟ್‌ ಸಮಾಪ್ತಿಗೊಳಿಸುವ ಸಾಧ್ಯತೆ ಇದೆ.

ಆದರೆ ಪೊಲೀಸರ ಕ್ರಮವನ್ನು ಪ್ರಶ್ನಿಸುವುದಾಗಿ ಪೊಲೀಸರು ತಿಳಿಸಿದ್ದಾರೆ. ಪಾಟೇಕರ್‌ ವಿರುದ್ಧ ತನುಶ್ರೀ ದತ್ತಾ ದಾಖಲಿಸಿದ್ದ ದೂರು ಕಳೆದ ವರ್ಷ ದೇಶದೆಲ್ಲೆಡೆ ಸಾಮಾಜಿಕ ಜಾಲತಾಣಗಳಲ್ಲಿ ಮೀ ಟೂ ಅಭಿಯಾನಕ್ಕೆ ನಾಂದಿ ಹಾಡಿತ್ತು.

ಮಾಡಬಾರದ್ದಲ್ಲ ಮಾಡಿದ್ರೂ #MeTooನಲ್ಲಿ ನನ್ನ ಹೆಸರಿಲ್ಲ