ಯುವ ಸಾಮ್ರಾಟ್ ಚಿರಂಜೀವಿ ಸರ್ಜಾ ಸಂಹಾರ ಸಿನಿಮಾ ಶೂಟಿಂಗ್ ಬೆನ್ನಲ್ಲೇ ಮತ್ತೊಂದು ಹೊಸ ಸಿನಿಮಾವನ್ನ ಕೈಗೆ ಎತ್ತಿಕೊಂಡಿದ್ದಾರೆ.
ಬೆಂಗಳೂರು (ಡಿ.07): ಯುವ ಸಾಮ್ರಾಟ್ ಚಿರಂಜೀವಿ ಸರ್ಜಾ ಸಂಹಾರ ಸಿನಿಮಾ ಶೂಟಿಂಗ್ ಬೆನ್ನಲ್ಲೇ ಮತ್ತೊಂದು ಹೊಸ ಸಿನಿಮಾವನ್ನ ಕೈಗೆ ಎತ್ತಿಕೊಂಡಿದ್ದಾರೆ.
'ರಾಜಾಮಾರ್ತಾಂಡ' ಅಂತ ಪವರ್ ಫುಲ್ ಟೈಟಲ್ ಇಟ್ಟುಕೊಂಡು ಬರುತ್ತಿರೋ ಈ ಚಿತ್ರದ ಮುಹೂರ್ತ ಇತ್ತೀಚಿಗೆ ರಾಮಕೃಷ್ಣ ರಸ್ತೆಯಲ್ಲಿ ವಿನಾಯಕನ ದೇವಸ್ಥಾನದಲ್ಲಿ ಮಾಡಲಾಯಿತು. ಚಿರಂಜೀವಿ ಸರ್ಜಾ ಡಿಫರೆಂಟ್ ಅವತಾರದಲ್ಲಿ ಕಾಣಿಸಿಕೊಳ್ಳಲಿದ್ದು ನಿರ್ದೇಶಕ ಕೆ ರಾಮ್ ನಾರಯಣ್ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಅಜಿತ್ ಸಿನಿಮಾ ನಿರ್ಮಾಪಕರಾಗಿದ್ದು, ಶಿವಕುಮಾರ್ ನಿರ್ಮಾಣ ಮಾಡುತ್ತಿದ್ದಾರೆ.
