ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಂದ್ರೆ ಹಂಗೆ ನೋಡಿ. ಯಾರನ್ನೇ ಕಂಡರೂ ಪ್ರೀತಿ, ಗೌರವದಿಂದ ಮಾತನಾಡಿಸುತ್ತಾರೆ. ಅಂಗಲಾಚಿ ಸಹಾಯ ಬೇಡಿದವರಿಗೆ ಭೂಲೋಕದ ಕರ್ಣ.

ಇತ್ತೀಚಿಗಂತೂ ಸ್ಯಾಂಡಲ್‌ವುಡ್‌ನಲ್ಲಿ ಯಾರೇ ಸಿನಿಮಾ ಮುಹೂರ್ತ, ಟ್ರೇಲರ್ ಹಾಗೂ ಹಾಡಿನ ಲಾಂಚ್‌ಗೆ ಡಿ-ಬಾಸ್ ಬೇಕೇಬೇಕು ಅನ್ನುತ್ತಾರೆ. ಎಷ್ಟೇ ಟೈಟ್‌ ಶೆಡ್ಯೂಲ್ ಇದ್ದರೂ ಹಾಜರಾಗಿ ತನ್ನ ಸ್ವಂತ ಸಿನಿಮಾದಂತೆ ನಡೆಸಿ ಕೊಡುತ್ತಾರೆ. ಕುಟುಂಬಸ್ಥರಂತೆ ಸಹಾಯ ಮಾಡಿ ಪ್ರೀತಿ ತೋರಿಸಿದ ದರ್ಶನ್‌ಗೆ ಮೇಘನಾ ಹಾಗೂ ಚಿರಂಜೀವಿ ಸರ್ಜಾ ತಮ್ಮ ಮನೆಯ ಭೀಮ ಎಂಬ ನಾಯಿ ಮರಿಯನ್ನು ದರ್ಶನ್‌ಗೆ ಗಿಫ್ಟ್‌ ಆಗಿ ನೀಡಿದ್ದಾರೆ.

ಚಾಲೆಂಜಿಂಗ್ ಸ್ಟಾರ್‌ಗೆ ಸಿಕ್ತು ಹೊಸ ಬಿರುದು; ಕೊಟ್ಟಿದ್ದು ಅಭಿಮಾನಿಗಳಲ್ಲ!

ಮೇಘನಾ ತನ್ನ ಇನ್‌ಸ್ಟಾಗ್ರಾಂ ಖಾತೆಯಲ್ಲಿ 'ಗುಡ್‌ ಮಾರ್ನಿಂಗ್ ಆ್ಯಂಡ್ ಹ್ಯಾಪಿ ಸಂಡೇ. ದರ್ಶನ್ ಸರ್ ನಮ್ಮ ಕುಟುಂಬಕ್ಕೆ ತುಂಬಾ ತುಂಬಾ ಸ್ಪೆಷಲ್‌. ಇವರು ನೀಡಿರುವ ಪ್ರೋತ್ಸಾಹಕ್ಕೆ ನಮ್ಮಿಂದ ಅವರಿಗೆ ಸಣ್ಣದೊಂದು ಉಡುಗೊರೆ' ಎಂದು ಬರೆದುಕೊಂಡಿದ್ದಾರೆ.