ತಮಿಳು ನಟನಿಂದ ಕನ್ನಡ ಚಿತ್ರದ ಟೀಸರ್ ರಿಲೀಸ್!
ತಮಿಳಿನ ಸ್ಟಾರ್ ನಟ ಧನುಷ್, ಕನ್ನಡದ ‘ಚಂಬಲ್’ ಚಿತ್ರದ ಟೀಸರ್ ಬಿಡುಗಡೆ ಮಾಡುವ ಮೂಲಕ ನೀನಾಸಂ ಸತೀಶ್ ಅವರ ಚಿತ್ರಕ್ಕೆ ಶುಭ ಹಾರೈಸಿದ್ದಾರೆ.
ಬುಧವಾರ ಸಂಜೆ ಐದು ಗಂಟೆಗೆ ಚೆನ್ನೈನಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಧನುಷ್ ಈ ಟೀಸರ್ ಬಿಡುಗಡೆ ಮಾಡಿದ್ದಾರೆ. ತುಂಬಾ ದಿನಗಳ ನಂತರ ಜೇಕಬ್ ವರ್ಗೀಸ್ ನಿರ್ದೇಶಿಸುತ್ತಿರುವ ಚಿತ್ರವಿದು. ನಾಯಕ ನಾಗಿ ನೀನಾಸಂ ಸತೀಶ್, ನಾಯಕಿಯಾಗಿ ಸೋನು ಗೌಡ ನಟಿಸುತ್ತಿದ್ದಾರೆ.
ಪ್ರಮುಖ ಪಾತ್ರಗಳಲ್ಲಿ ಕಿಶೋರ್, ಪವನ್ ಕುಮಾರ್, ರೋಜರ್ ನಾರಾಯಣ ಅಭಿನಯಿಸಿದ್ದಾರೆ. ಇದೊಂದು ವಿಶೇಷವಾದ ಕತೆಯಾಗಿದ್ದು, ಈ ಸಿನಿಮಾ ಮೂಲಕ ತಾನು ಬೇರೆ ಭಾಷೆಗಳ ಮಾರುಕಟ್ಟೆಗೂ ಹೋಗಲಿದ್ದೇನೆಂದು ನಟ ನೀನಾಸಂ ಸತೀಶ್ ಹೇಳಿಕೊಂಡಿ ದ್ದರು. ಚಿತ್ರದ ಒಂದು ಸಾಲಿನ ಕತೆ ಹಾಗೂ ದೃಶ್ಯಗಳನ್ನು ನೋಡಿ ಧನುಷ್ ಟೀಸರ್ ಬಿಡುಗಡೆ ಮಾಡುವುದಕ್ಕೆ ಒಪ್ಪಿಕೊಂಡು ಅವರೇ ಪುಟ್ಟ ಕಾರ್ಯಕ್ರಮ ಆಯೋಜಿಸಿ ಬಿಡುಗಡೆ ಮಾಡಿದ್ದಾರೆ. ಅಲ್ಲದೆ ‘ಇದೊಂದು ವಿಶೇಷವಾದ ಕತೆಯನ್ನು ಒಳಗೊಂಡಿರುವ ಚಿತ್ರದ ಟೀಸರ್ ಬಿಡುಗಡೆ ಮಾಡುವುದಕ್ಕೆನನಗೆ ಖುಷಿ ಆಗುತ್ತಿದೆ’ ಎಂದು ತಮ್ಮ ಸಂತಸವನ್ನು ಹಂಚಿಕೊಂಡಿದ್ದಾರೆಂಬುದು ಸತೀಶ್ ಅವರ ಮಾತು.