ಮುಂಗಾರು ಮಳೆ ಚಿತ್ರದ ನಂತರ ಗಣೇಶ್ ಚಿತ್ರಕ್ಕೆ ಮೂರು ದಿನಗಳಲ್ಲಿ ಇಷ್ಟು ಕಲೆಕ್ಷನ್ ಆಗಿದ್ದು ಇದೇ ಮೊದಲು ಎನ್ನುತ್ತಿವೆ ಮೂಲಗಳು.

ಗಣೇಶ್ ಪಾಲಿಗೆ ಹೊಸ ವರ್ಷದ ಆರಂಭವೇ ಸಖತ್ ಆಗಿದೆ. ಸಿಂಪಲ್ ಸುನಿ ನಿರ್ದೇಶನದ ‘ಚಮಕ್’ ಸಿನಿಮಾದ ಗಳಿಕೆ ಮೂರು ದಿನಗಳಲ್ಲಿ ಐದೂವರೆ ಕೋಟಿ ದಾಟಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಮುಂಗಾರು ಮಳೆ ಚಿತ್ರದ ನಂತರ ಗಣೇಶ್ ಚಿತ್ರಕ್ಕೆ ಮೂರು ದಿನಗಳಲ್ಲಿ ಇಷ್ಟು ಕಲೆಕ್ಷನ್ ಆಗಿದ್ದು ಇದೇ ಮೊದಲು ಎನ್ನುತ್ತಿವೆ ಮೂಲಗಳು.

ಸುನಿ ಹಾಗೂ ಗಣೇಶ್ ಕಾಂಬಿನೇಷನ್ ಚಿತ್ರ ಎನ್ನುವ ಕಾರಣಕ್ಕೆ ‘ಚಮಕ್’ ಸಾಕಷ್ಟು ನಿರೀಕ್ಷೆ ಹುಟ್ಟು ಹಾಕಿತ್ತು. ಚಮಕ್ ಬಿಡುಗಡೆಯಾಗಿ ರಾಜ್ಯದ ಎಲ್ಲ ಚಿತ್ರಮಂದಿರಗಳಲ್ಲೂ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿದೆ. ಹೊಸ ವರ್ಷಕ್ಕೆ ಗಣೇಶ್‌ಗೆ ಭರ್ಜರಿ ಗಿಫ್ಟ್ ಕೊಟ್ಟಂತಾಗಿದೆ.