ಸ್ಯಾಂಡಲ್’ವುಡ್’ಗೂ ಬರಲಿದೆ ದಂಗಲ್

https://static.asianetnews.com/images/authors/56bf5dcb-7868-50e0-b2d0-38391a34809d.jpg
First Published 25, Jul 2018, 2:00 PM IST
Challenging star Darshan acting in  Paiwan Katera based cinema
Highlights

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಬಹು ನಿರೀಕ್ಷಿತ ಚಿತ್ರ ಕುರುಕ್ಷೇತ್ರಕ್ಕಾಗಿ ಅಭಿಮಾನಿಗಳೆಲ್ಲಾ ಕಾಯುತ್ತಿದ್ದಾರೆ. ಈಗ ಮತ್ತೊಂದು ಗುಡ್ ನ್ಯೂಸ್ ನೀಡುತ್ತಿದ್ದಾರೆ ದರ್ಶನ್. ಅವರನ್ನು ಪೈಲ್ವಾನ್  ಆಗಿ ನೋಡಬಹುದಾಗಿದೆ.  ಇದಕ್ಕಾಗಿ ದರ್ಶನ್ ಸಖತ್ ವರ್ಕೌಟ್ ಮಾಡಿದ್ದಾರೆ. 

ಬೆಂಗಳೂರು (ಜು. 25): ಚಾಲೆಂಜಿಂಗ್ ಸ್ಟಾರ್ ದರ್ಶನ್ ಈಗ ಪೈಲ್ವಾನ್ ಆಗಲು ಹೊರಟಿದ್ದಾರೆ. ಅಖಾಡಕ್ಕಿಳಿದು ಕುಸ್ತಿ ಮಾಡಲಿದ್ದಾರೆ. ಹೌದಾ?  ಏನಿದು ಹೊಸ ಸುದ್ದಿ ಅಂತಿರಾ? ಹೌದು. ದಾವಣಗೆರೆಯ ಪೈಲ್ವಾನ್ ಕಾಟೇರಾ ಜೀವನಾಧಾರಿತ ಸಿನಿಮಾದಲ್ಲಿ ದರ್ಶನ್ ಅಭಿನಯಿಸಲಿದ್ದಾರೆ. 

ಈಗಾಗಲೇ ಕಾಟೇರಾ ಬಗ್ಗೆ  ಅಧ್ಯಯನ ನಡೆಸಿರುವ ದರ್ಶನ್ ಸಖತ್ ತಯಾರಿ ನಡೆಸುತ್ತಿದ್ದಾರೆ. ದಿನಕ್ಕೆ 25 ಚಪಾತಿ, 3 ಕೋಳಿ, 15 ಗ್ಲಾಸ್ ಕಲ್ಲಂಗಡಿ ಜ್ಯೂಸ್ ಸೇವಿಸಲಿದ್ದಾರೆ. 

ದರ್ಶನ್’ಗೆ ಕಾಟೇರಾ ಪಾತ್ರ ಸಿಕ್ಕಾಪಟ್ಟೆ ಇಷ್ಟವಾಗಿದ್ದು ಒಂದು ಕಂಡೀಶನ್ ಹಾಕಿದ್ದಾರೆ. ಚಿತ್ರದಲ್ಲಿ ಶೇ. 96 ರಷ್ಟು ಕನ್ನಡಿಗರೇ ಇರಬೇಕು ಎಂದಿದ್ದಾರಂತೆ. ನವೆಂಬರ್’ನಲ್ಲಿ ಚಿತ್ರೀಕರಣ ಶುರುವಾಗಲಿದೆ. ನಿರ್ಮಾಪಕ ಉಮಾಪತಿ ಈ ಚಿತ್ರವನ್ನು ನಿರ್ಮಿಸಲಿದ್ದು ಸ್ವತಃ ಅವರೇ ಈ ಸುದ್ದಿಯನ್ನು ಹೊರಹಾಕಿದ್ದಾರೆ. 

loader