ಬುಲೆಟ್ ಪ್ರಕಾಶ್ ಆರೋಗ್ಯದ ಬಗ್ಗೆ ಒಂದು ಸಣ್ಣ ನ್ಯೂಸ್

First Published 12, Mar 2018, 3:00 PM IST
BUllet Prakash says I am Fine
Highlights

 ನನಗೆ ಅನಾರೋಗ್ಯ ಎಂದು ಕೆಲವೆಡೆ ಸುದ್ದಿ ಬರುತ್ತಿರುವುದು ಸುಳ್ಳು. ವಾರಕ್ಕೆರಡು ಬಾರಿ ನಾನು ವಿಕ್ರಮ್ ಆಸ್ಪತ್ರೆಗೆ ಹೋಗಿ ಬರುತ್ತೇನೆ.

ಬೆಂಗಳೂರು(ಮಾ.12): ಇತ್ತೀಚಿಕೆ ಕೆಲವು ಮಾಧ್ಯಮಗಳಲ್ಲಿ ಕನ್ನಡದ ಖ್ಯಾತ ಹಾಸ್ಯ ನಟ ಬುಲೆಟ್ ಪ್ರಕಾಶ್ ಅವರ ಆರೋಗ್ಯದ ಬಗ್ಗೆ ಸುಳ್ಳು ಸುದ್ದಿ ಹರಿದಾಡುತ್ತಿವೆ.

ಈ ಬಗ್ಗೆ ಸ್ವತಃ ಬುಲೆಟ್ ಪ್ರಕಾಶ್ ಅವರೆ ಸುವರ್ಣ ನ್ಯೂಸ್'ಗೆ ಸ್ಪಷ್ಟಪಡಿಸಿ ' ನಾನು ಬುಲೆಟ್ ಪ್ರಕಾಶ್.. ನನ್ನ ಆರೋಗ್ಯದಲ್ಲಿ ವ್ಯತ್ಯಯ ಇಲ್ಲ. ನನಗೆ ಅನಾರೋಗ್ಯ ಎಂದು ಕೆಲವೆಡೆ ಸುದ್ದಿ ಬರುತ್ತಿರುವುದು ಸುಳ್ಳು. ವಾರಕ್ಕೆರಡು ಬಾರಿ ನಾನು ವಿಕ್ರಮ್ ಆಸ್ಪತ್ರೆಗೆ ಹೋಗಿ ಬರುತ್ತೇನೆ. ಆರೋಗ್ಯದಲ್ಲಿ ತೊಂದರೆ ಇಲ್ಲ. ಕಳೆದವಾರ ಜ್ವರ ಬಂದಿದ್ದ ಹಿನ್ನೆಲೆಯಲ್ಲಿ  ಚಿಕಿತ್ಸೆ ಪಡೆದಿದ್ದೆ.ನನ್ನ ಆರೋಗ್ಯ ಸಮಸ್ಯೆ ಎಂಬ ವದಂತಿ ಸುದ್ದಿಗೆ ಕಿವಿಗೊಡಬೇಡಿ' ಎಂದು ಮನವಿ ಮಾಡಿದ್ದಾರೆ.

loader