- ‘ಧೈರ್ಯಂ’ ಖ್ಯಾತಿಯ ನಟಿ ಅದಿತಿ ಪ್ರಭುದೇವ್ ಇಷ್ಟು ಹೇಳಿ ಗಳಗಳನೆ ಅತ್ತರು. ಹೀಗೆ ಅವರು ಕಣ್ಣೀರು ಹಾಕಿದ್ದು ನೀನಾಸಂ ಸತೀಶ್ ನಟನೆಯ, ಚಂದ್ರಮೋಹನ್ ನಿರ್ದೇಶನದ ‘ಬ್ರಹ್ಮಚಾರಿ’ ಚಿತ್ರೀಕರಣದ ಅನುಭವ ಹೇಳಿಕೊಳ್ಳುವ ಸಂದರ್ಭದಲ್ಲಿ. ‘ಬ್ರಹ್ಮಚಾರಿ’ ಚಿತ್ರದ ಟೀಸರ್ ಲಾಂಚ್ ಸಂದರ್ಭ ಈ ಘಟನೆ ನಡೆಯಿತು. ಅದಿತಿ ಪ್ರಭುದೇವ್ ಈ ಪರಿಯಲ್ಲಿ ಕಣ್ಣೀರಿಟ್ಟಿದ್ದು ಯಾಕೆ? ಇಷ್ಟಕ್ಕೂ ಅಲ್ಲಿ ಆಗಿದ್ದೇನು? ಅದಕ್ಕೆ ಕಾರಣ ಇದೆ.

ಬಜಾರ್ ಹುಡುಗಿಗೆ ಸಿಕ್ತು ‘ಬ್ರಹ್ಮಚಾರಿ’ಗಳಿಂದ ಸಾಥ್!

‘ಬ್ರಹ್ಮಚಾರಿ’ ಚಿತ್ರಕ್ಕೆ ಅದಿತಿ ಪ್ರಭುದೇವ್ ನಾಯಕಿ ನಟಿ. ಈ ಚಿತ್ರದ ನಿರ್ಮಾಪಕ ಉದಯ್ ಕೆ. ಮೆಹ್ತಾ ನಿರ್ಮಾಣದ ಮತ್ತೊಂದು ಚಿತ್ರ ‘ಸಿಂಗ’ದಲ್ಲೂ ಚಿರಂಜೀವಿ ಸರ್ಜಾಗೆ ಅದಿತಿ ಪ್ರಭುದೇವ್ ಅವರೇ ನಾಯಕಿ. ಒಂದು ಹಂತದಲ್ಲೀಗ ಅದಿತಿ ಪ್ರಭುದೇವ್ ಕನ್ನಡಕ್ಕೆ ಬಹು ಬೇಡಿಕೆಯ ನಟಿಯಾಗುವ ಎಲ್ಲಾ ಸಾಧ್ಯತೆಗಳು ಕಾಣುತ್ತಿವೆ. ಸಂದರ್ಭ ಹೀಗಿರುವಾಗ
ನಿರ್ಮಾಣದಲ್ಲಿ ಉದಯ್ ಕೆ. ಮೆಹ್ತಾ ಅವರ ವೃತ್ತಿಪರತೆಯನ್ನು ಮೆಚ್ಚಿಕೊಂಡು ಮಾತನಾಡುವಾಗ ಭಾವುಕತೆಗೆ ಒಳಗಾದರು.

‘ಬ್ರಹ್ಮಚಾರಿ’ ಆದ ನೀನಾಸಂ ಸತೀಶ್!

‘ನಾನಿಲ್ಲಿಗೆ ನಟಿಯಾಗಿ ಆಕಸ್ಮಿಕವಾಗಿ ಬಂದೆ. ಆ್ಯಂಕರಿಂಗ್ ಮೇಲೆ ಆಸೆಯಿತ್ತು. ಅದನ್ನೇ ವೃತ್ತಿಯಾಗಿಸಿಕೊಳ್ಳುವ ಹಂಬಲದಲ್ಲಿ ಮೈಕ್ ಹಿಡಿದು ವೇದಿಕೆ ಹತ್ತಿದ್ದವಳಿಗೆ ಸಿನಿಮಾದ ಆಫರ್ ಬಂತು. ಆಕಸ್ಮಿಕ ಎನ್ನುವ ಹಾಗೆ ನಟಿಯಾದೆ. ಆ ಜರ್ನಿ ಶುರುವಾಗಿಯೇ ಇಲ್ಲಿಗೆ ಮೂರಕ್ಕಿಂತ ಹೆಚ್ಚು ವರ್ಷ ಆಯಿತು. ಐದಾರು ಸಿನಿಮಾಗಳು ಆದವು. ಅದೇನೋ ಗೊತ್ತಿಲ್ಲ, ‘ಬ್ರಹ್ಮಚಾರಿ’ ಚಿತ್ರದ ಶೂಟಿಂಗ್ ಸೆಟ್‌ನಲ್ಲಿ ಸಿಕ್ಕಷ್ಟು ಕಂಫರ್ಟ್ ಫೀಲಿಂಗ್ ಇನ್ನೆಲ್ಲೂ ಸಿಕ್ಕಿಲ್ಲ. ಅಕ್ಷರಶಃ ಮನೆಯ ವಾತಾವರಣ ಅಲ್ಲಿತ್ತು. ನಾನ್ಯಾವತ್ತೂ ಕೂಡ
ಭಯದಿಂದ ಕಾಲ ಕಳೆದಿಲ್ಲ. ಅಂತಹದೊಂದು ವಾತಾವರಣ ನನಗೆ ಸಿಕ್ಕಿದ್ದು ಇದೇ ಮೊದಲು’ ಎನ್ನುತ್ತಲೇಗಳಗಳನೇ ಅತ್ತು ಬಿಟ್ಟರು.