ಬಾಲಿವುಡ್‌ನಲ್ಲಿ ಕಾಲ್ ಶೀಟ್ ಫ್ರೀ ಇಲ್ಲದಷ್ಟು ಬ್ಯುಸಿ ಇರುವ ನಟ ರಿಯಲ್ ಲೈಫ್‌ನಲ್ಲಿ ಸ್ಟಾರ್ ಆಗಲು 9ನೇ ಕ್ಲಾಸ್‌ನಲ್ಲಿ ಡುಮ್ಕಿ ಹೊಡೆದದ್ದೇ ಕಾರಣ ಅಂತೆ!
ಹೇ! ಹ್ಯಾಂಡ್ಸಮ್, ಹೇ ವಿಲನ್! ಎಂದು ಕರೆಸಿಕೊಂಡು ಬಾಲಿವುಡ್ ಬಿಗ್ ಮೇನಿಯಾದಲ್ಲಿ ಇನ್ನು ಮೂರು ವರ್ಷ ಕಾಲ್ ಶೀಟ್ ಫ್ರಿ ಇಲ್ಲದಷ್ಟು ಬ್ಯುಸಿ ಇರುವ ನಟ ಸಿದ್ಧಾರ್ಥ ಮಲೋತ್ರ. ತಮ್ಮ ರಿಯಲ್ ಲೈಫ್ ನ ಮರೆಯಲಾರದ ಘಟನೆಯೊಂದನ್ನು ಬಹಿರಂಗಪಡಿಸಿದ್ದಾರೆ.
ಸಿನಿಮಾ ತಾರೆಯರು ಭಾಗಿಯಾಗುವ 'ಕಪಿಲ್ ಶರ್ಮ ಶೋ' ನಲ್ಲಿ ‘ಜಬ್ರರಿಯಾ’ ಜೋಡಿ ಪ್ರಮೋಷನ್‌ಗೆಂದು ಆಗಮಿಸಿದ್ದರು. ಕಪಿಲ್ ಕೆಳಿದ ಪ್ರಶ್ನೆವೊಂದಕ್ಕೆ ಸಿದ್ದಾರ್ಥ್ ತಾನು 9 ಕ್ಲಾಸ್ ಫೇಲ್ ಆಗಿರುವುದರ ಬಗ್ಗೆ ಹೇಳಿಕೊಂಡಿದ್ದಾರೆ.
'ಹೌದು ನಾನು 9 ಕ್ಲಾಸ್‌ನಲ್ಲಿದ್ದಾಗ ಹುಡುಗಿಯರಿಂದಾಗಿ ಓದುವುದನ್ನು ಬಿಟ್ಟು ನನ್ನ ಗಮನ ಬೇರೆಡೆಗೆ ಎಳೆಯಿತು. ಈ ಫೆಲ್ಯೂರ್ ನಿಂದ ನಾನು ಇಂದು ನನ್ನ ಗುರಿ ಸಾಧಿಸಲು ಸಹಾಯವಾಯಿತು. ಇದನ್ನು ಹೆಮ್ಮೆಯಿಂದ ಹೇಳಿಕೊಳ್ಳುತ್ತೇನೆ. 10ನೇ ಕ್ಲಾಸ್ ಹಾಗೂ 11 ಕ್ಲಾಸ್ ನಲ್ಲಿ ಉತ್ತಮ ಅಂಕ ಪಡೆದು ಕ್ಲಿಯರ್ ಮಾಡಿಕೊಂಡಿದ್ದೇನೆ 'ಎಂದು ಮೊದಲ ಬಾರಿಗೆ ಮಾಧ್ಯಮದ ಎದುರು ಹೇಳಿಕೊಂಡಿದ್ದಾರೆ.
ಇನ್ನು ಜಬ್ರರಿಯಾ ಜೋಡಿ ಚಿತ್ರದ ಟ್ರೇಲರ್ ಸಿಕ್ಕಾಪಟ್ಟೆ ವೈರಲ್ ಆಗಿದ್ದು ಉತ್ತಮ ಪ್ರತಿಕ್ರಿಯೆ ಪಡೆಯುತ್ತಿದೆ.
