ಕ ತ್ರಿನಾ ಕೈಫ್ ಮತ್ತು ಸಲ್ಮಾನ್ ಖಾನ್ ನಟನೆಯ ‘ಭಾರತ್’ ಚಿತ್ರ ತೆರೆಗೆ ಬರುವ ಹಂತದಲ್ಲಿ ಇರುವಾಗಲೇ ಕತ್ರಿನಾ ಕೈಫ್ ಸ್ವಂತ ನಿರ್ಮಾಣ ಸಂಸ್ಥೆ ಆರಂಭಿಸುವ ಉತ್ಸಾಹದಲ್ಲಿದ್ದಾರೆ. ಅವರು ಅಂದುಕೊಂಡಂತೆ ಆದರೆ ಈ ವರ್ಷದ ಕಡೆಗೆ ಸ್ವಂತ ನಿರ್ಮಾಣ ಸಂಸ್ಥೆಯಲ್ಲಿ ಫ್ರೆಂಚ್‌ನ ‘ಹಿ ಲವ್ಸ್ ಮೀ ಹಿ ಲವ್ಸ್ ಮೀ ನಾಟ್’ ಚಿತ್ರದ ರಿಮೇಕ್‌ನಲ್ಲಿ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ. 

ಈ ಹಿಂದೆ ಸಾಕಷ್ಟು ನಟ, ನಟಿಯರು ನಿರ್ಮಾಣಕ್ಕೆ ಇಳಿದಿರುವ ಉದಾಹರಣೆ ನಮ್ಮಲ್ಲಿ ತುಂಬಾ ಇದೆ. ಆದರೆ ಕತ್ರಿನಾ ಸ್ವಲ್ಪ ಡಿಫರೆಂಟ್. ಅದು ಏನೆಂದು ಅವರೇ ಹೇಳಿದ್ದಾರೆ. ‘ನಾನು ಯಾವುದೇ ಹೊಸ ಸಾಧ್ಯತೆಗಳಿಗೆ ಬೇಗನೆ ತೆರೆದುಕೊಳ್ಳುವುದಿಲ್ಲ. ಮೊದಲು ಸೋಷಲ್ ಮೀಡಿಯಾ ಬಂದಾಗ ನಾನು ಅದರತ್ತ ಹೆಚ್ಚು ಒಲವು ತೋರಿಯೇ ಇರಲಿಲ್ಲ. ನನ್ನ ಮ್ಯಾನೇಜರ್ ಬಂದು ಟ್ವಿಟ್ಟರ್‌ನಲ್ಲಿ ಅಕೌಂಟ್ ಓಪನ್ ಮಾಡೋಣ ಎಂದಾಗ ಬೇಡ ಎಂದಿದ್ದೆ. ಆದರೆ ಅವರೇ ನನಗೆ ಅದರ ಮಹತ್ವ ತಿಳಿಸಿದ್ದರಿಂದ ಒಪ್ಪಿದ್ದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಈಗ ಅದರ ಪ್ರಸಾರ ವ್ಯಾಪ್ತಿ, ಮಹತ್ವ ಏನು ಎಂದು ಗೊತ್ತಾಗಿದೆ. ಅದೇ ರೀತಿ ಹೊಸ ಪ್ರೊಡಕ್ಷನ್ ಹೌಸ್ ಶುರು ಮಾಡಿ ಮತ್ತೊಂದು ಹೊಸ ಲೋಕಕ್ಕೆ ಪ್ರವೇಶ ಪಡೆಯೋಣ, ಅದರ ಅನುಭವವನ್ನೂ ಹೊಂದೋಣ ಎನ್ನುವುದು ನನ್ನ ಬಯಕೆ’ ಎಂದು ಹೇಳಿಕೊಂಡಿದ್ದಾರೆ. ಎಲ್ಲವೂ ಅಂದುಕೊಂಡಂತೆ ಆದರೆ ಕತ್ರಿನಾ ಕೈಫ್ ಮುಂದಿನ ಚಿತ್ರಗಳು ಅವರದ್ದೇ ಪ್ರೊಡಕ್ಷನ್ ಹೌಸ್ ನಿಂದ ಹೊರ ಬರಬಹುದು.

’ಇಂದಿರಾಗಾಂಧಿ’ ಆಗ್ತಾರಾ ಕತ್ರಿನಾ ಕೈಫ್?