ತನಗೆ ಅನ್ನಿಸಿದ್ದನ್ನು, ತಾನು ಅನುಭವಿಸಿದ್ದನ್ನು ಓಪನ್‌ ಆಗಿ ಹೇಳಿಕೊಳ್ಳುವ ನಟಿಯರಲ್ಲಿ ದೀಪಿಕಾ ಪಡುಕೋಣೆ ಕೂಡ ಒಬ್ಬರು. ತನ್ನ ಬಾಳಲ್ಲಿ ಎದುರಿಸಿದ ಸವಾಲುಗಳು, ಬಂದ ಸಮಸ್ಯೆಗಳನ್ನು ಗೆದ್ದ ಬಗೆಯನ್ನು ಸಾಕಷ್ಟುಸಂದರ್ಭದಲ್ಲಿ ದೀಪಿಕಾ ಮನಸು ಬಿಚ್ಚಿ ಹೇಳಿಕೊಂಡ್ಡಿದ್ದಿದೆ.

ಖಾಸಗಿ ವಾಹಿನಿಯೊಂದು ನಡೆಸಿದ ಸಂದರ್ಶನದಲ್ಲಿ ತಾನು ಖಿನ್ನತೆಯನ್ನು ಗೆದ್ದು ಬಂದ ಬಗೆಯನ್ನು ಹೇಳಿದ್ದಾರೆ, ಕೇಳಿ.

ಐಡಿ ಕೇಳಿದ ಸೆಕ್ಯುರಿಟಿ! ನೆಟ್ಟಿಗರ ಮನಸ್ಸು ಗೆದ್ದ ದೀಪಿಕಾ ರಿಯಾಕ್ಷನ್‌

‘ನನ್ನ ಪ್ರಕಾರ ಡಿಪ್ರೆಷನ್‌ಗೆ ಒಳ್ಳೆಯ ಮದ್ದು ಎಂದರೆ ಅದು ಹೋರಾಟ. ಜಗತ್ತೇ ಬೇಡ ಎಂದು ಅನ್ನಿಸುವಾಗ ನಾನು ಏನಾದರೂ ಮಾಡಿ ಗೆಲ್ಲುತ್ತೇನೆ ಎನ್ನುವ ಮನಸ್ಸು ಮಾಡಿ ಅದರತ್ತ ದಿಟ್ಟಹೋರಾಟ ಮಾಡಬೇಕು. ಆ ಹೋರಾಟದ ತೀವ್ರತೆಯ ಮುಂದೆ ಖಿನ್ನತೆಗೆ ಜಾಗವೇ ಇಲ್ಲದಂತೆ ಮಾಯವಾಗಬೇಕು. ಆ ಮಟ್ಟಿಗೆ ನನ್ನ ಹೋರಾಟವೂ ಇದ್ದದ್ದರಿಂದ ನಾನು ಖಿನ್ನತೆಯನ್ನು ಗೆದ್ದು ಬಂದೆ’ ಎಂದು ಹೇಳಿದ್ದಾರೆ.

ಕೋಟಿ ಕೋಟಿಗಳ ಒಡತಿ ಈ ನಟಿ; ಹೊಟೇಲ್‌ಗೆ ಹೋದಾಗ ಇದನ್ನು ತರೋದನ್ನ ಮಾತ್ರ ಮರೆಯಲ್ಲ!

ಜೀವನದಲ್ಲಿ ಎಂತಹವರಿಗೇ ಆದರೂ ಒಂದಲ್ಲ ಒಂದು ಹಂತದಲ್ಲಿ ಈ ಖಿನ್ನತೆ ಎನ್ನುವುದು ಆವರಿಸಿಕೊಂಡು ಬಿಡುತ್ತದೆ. ಆ ಕ್ಷಣಕ್ಕೆ ದೀಪಿಕಾ ರೀತಿ ಗಟ್ಟಿಯಾದ ನಿರ್ಧಾರ ಮಾಡಿ ಮುಂದೆ ಸಾಗಿದರೆ ಬದುಕು ಸುಂದರ. ಆ ನಿಟ್ಟಿನಲ್ಲಿ ಮಾದರಿ ನಮ್ಮೀ ದೀಪಿಕಾ.