ಪದ್ಮಾವತ್ ನಟಿ ದೀಪಿಕಾ ಪಡುಕೋಣೆ ಬಾಲಿವುಡ್ ನಲ್ಲಿ ಅತೀ ಹೆಚ್ಚು ಸಂಭಾವನೆ ಪಡೆಯುವ ನಟಿ. ಬಹು ಬೇಡಿಕೆ ನಟಿ. ಇವರ ಬಗ್ಗೆ ಅವರ ಸ್ನೇಹಿತೆ ಸ್ನೇಹಾ ರಾಮಚಂದರ್ ಇಂಟರೆಸ್ಟಿಂಗ್ ವಿಚಾರವೊಂದನ್ನು ಹೊರಹಾಕಿದ್ದಾರೆ.  

ದೀಪಿಕಾ ಪಡುಕೋಣೆ ಬೆಸ್ಟ್ ಫ್ರೆಂಡ್ ಸ್ನೇಹಾ ರಾಮಚಂದರ್ ಫ್ರೆಂಡ್ ಶೀಪ್ ಡೇ ದಿನಕ್ಕಾಗಿ ದೀಪಿಕಾ ಬಗ್ಗೆ ಎಮೋಶನಲ್ ಪತ್ರವೊಂದನ್ನು ಬರೆದಿದ್ದಾರೆ. ಇದೂವರೆಗೂ ಕೇಳಿರದ ವಿಚಾರಗಳನ್ನು ಶೇರ್ ಮಾಡಿದ್ದಾರೆ.

ದೀಪಿಕಾ ಟ್ರಾವೆಲಿಂಗ್ ಮಾಡುವಾಗ ಅವರು ಉಳಿದುಕೊಳ್ಳುವ ಹೊಟೇಲ್ ನಿಂದ ಶಾಂಪೂ ಬಾಟೆಲ್ ಗಳನ್ನು ತರುತ್ತಾರಂತೆ. ಅವುಗಳೆಂದರೆ ದೀಪಿಕಾಗೆ ಸಿಕ್ಕಾಪಟ್ಟೆ ಇಷ್ಟವಂತೆ. ಅವೂ ಕೂಡಾ ಪ್ರಯಾಣಿಕರಿದ್ದಂತೆ ಎಂದು ಭಾವಿಸುತ್ತಾರೆ. ಹಾಗಾಗಿ ಅವುಗಳನ್ನು ತೆಗೆದುಕೊಂಡು ಬರುತ್ತಾರಂತೆ! ಇರಲಿ ಬಿಡಿ ಒಬ್ಬೊಬ್ಬರಿಗೆ ಒಂದು ಖಯಾಲಿ ಇರುತ್ತೆ! 

ದೀಪಿಕಾ ಸದ್ಯ ಚಪಕ್ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಜೊತೆಗೆ ಕಪಿಲ್ ದೇವ್ ಬಯೋಪಿಕ್ 83 ಸಿನಿಮಾದಲ್ಲಿ ನಟಿಸುತ್ತಿದ್ದಾರೆ.