ನರೇಂದ್ರ ಮೋದಿ ಸರ್ಕಾರ ಐತಿಹಾಸಿಕ ನಿರ್ಧಾರವೊಂದನ್ನು ತೆಗೆದುಕೊಂಡಿದೆ. ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ ಆರ್ಟಿಕಲ್ 370 ಯನ್ನು ರದ್ದು ಗೊಳಿಸಿ ಇತಿಹಾಸದಲ್ಲಿ ದಾಖಲಾಗುವ ಮಹತ್ತರ ನಿರ್ಣಯ ತೆಗೆದುಕೊಂಡಿದೆ ಮೋದಿ ಸರ್ಕಾರ. 

ಕಾಶ್ಮೀರಿಗಳ ದಶಕಗಳ ಕೂಗಿಗೆ ಈಗ ನ್ಯಾಯ ಸಿಕ್ಕಂತಾಗಿದೆ.  ಆರ್ಟಿಕಲ್ 370 ರದ್ದುಗೊಳಿಸಿ ಕಾಶ್ಮೀರಿಗಳು ನಿಟ್ಟುಸಿರು ಬಿಡುವಂತೆ ಮಾಡಿದ ಕೇಂದ್ರದ ನಿರ್ಧಾರವನ್ನು ಎಲ್ಲರೂ ಶ್ಲಾಘಿಸುತ್ತಿದ್ದಾರೆ. ಹೆಚ್ಚಿನವರು ಸ್ವಾಗತಿಸಿದರೆ ಇನ್ನು ಕೆಲವರು ವಿರೋಧಿಸುತ್ತಿದ್ದಾರೆ. ಪರ-ವಿರೋಧ ಚರ್ಚೆಗಳು ಶುರುವಾಗಿದೆ. ಈ ಐತಿಹಾಸಿಕ ನಿರ್ಧಾರವನ್ನು ಸಿನಿಮಾ ಸೆಲೆಬ್ರಿಟಿಗಳು ಹೇಗೆ ಸ್ವಾಗತಿಸಿದರು ಎಂಬುದು ಇಲ್ಲಿದೆ ನೋಡಿ.