ಪುಲ್ವಾಮ ದಾಳಿಗೆ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತದೆ. ಬಾಲಿವುಡ್ ಮಂದಿಯೂ ಈ ದಾಳಿಯನ್ನು ಖಂಡಿಸಿದ್ದಾರೆ. ಹುತಾತ್ಮ ಯೋಧರಿಗೆ ನಮನ ಸಲ್ಲಿಸಿದ್ದಾರೆ. ಯಾರ್ಯಾರು ಏನೇನು ಹೇಳಿದ್ದಾರೆ? ಇಲ್ಲಿದೆ ಓದಿ.
ಜಮ್ಮು, ಕಾಶ್ಮೀರ (ಫೆ. 15): ಭಾರತೀಯ ಯೋಧರ ಮೇಲೆ ಪುಲ್ವಾಮ ಪ್ರದೇಶದಲ್ಲಿ ಉಗ್ರರು ಆತ್ಮಾಹುತಿ ದಾಳಿ ನಡೆಸಿದ್ದಾರೆ. ಉಗ್ರರ ಪೈಶಾಚಿಕ ದಾಳಿಗೆ 44 ಯೋಧರು ಬಲಿಯಾಗಿದ್ದಾರೆ. ಉಗ್ರರ ಈ ದಾಳಿಯನ್ನು ಎಲ್ಲಾ ದೇಶಗಳು ಖಂಡಿಸಿವೆ. ದೇಶಾದ್ಯಂತ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.
ಉಗ್ರರ ಈ ಕೃತ್ಯಕ್ಕೆ ಸ್ಯಾಂಡಲ್ ವುಡ್, ಬಾಲಿವುಡ್ ಹಾಗೂ ಹಾಲಿವುಡ್ ಮಂದಿ ಖಂಡನೆ ವ್ಯಕ್ತಪಡಿಸಿದ್ದಾರೆ.
ನಟಿ ಪ್ರಿಯಾಂಕ ಚೋಪ್ರಾ, ಪುಲ್ವಾಮ ದಾಳಿ ನಿಜಕ್ಕೂ ಆಘಾತ ತಂದಿದೆ. ದ್ವೇಷ ಯಾವುದಕ್ಕೂ ಉತ್ತರವಲ್ಲ. ದಾಳಿಯಲ್ಲಿ ಮಡಿದ ಯೋಧರ ಆತ್ಮಕ್ಕೆ ಶಾಂತಿ ಸಿಗಲಿ. ಕುಟುಂಬದವರಿಗೆ ಆ ನೋವನ್ನು ಭರಿಸುವ ಶಕ್ತಿಯನ್ನು ಭಗವಂತ ನೀಡಲಿ. ದಾಳಿಯಲ್ಲಿ ಗಾಯಗೊಂಡ ಯೋಧರು ಬೇಗ ಗುಣಮುಖರಾಗಲಿ’ ಎಂದು ಟ್ವೀಟ್ ಮಾಡಿದ್ದಾರೆ.
ಸಲ್ಮಾನ್ ಖಾನ್ ’ ನಮ್ಮ ಪ್ರೀತಿಯ ಯೋಧರಿಗಾಗಿ ನನ್ನ ಹೃದಯ ಮಿಡಿಯುತ್ತದೆ. ದೇಶಕ್ಕಾಗಿ ತಮ್ಮ ಪ್ರಾಣವನ್ನು ಬಲಿ ನೀಡಿದ್ದಾರೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ’ ಎಂದಿದ್ದಾರೆ.
ಇದೊಂದು ಭಯಾನಕ, ನಾಚಿಕೆಗೇಡಿನ ಕೃತ್ಯ. ಕೋಪವನ್ನು ಪದಗಳಲ್ಲಿ ಹೇಳಲಾಗುತ್ತಿಲ್ಲ’ ಎಂದು ಅಜಯ್ ದೇವಗನ್ ಆಕ್ರೋಶ ವ್ಯಕ್ತಪಡಿಸಿದ್ದಾನೆ.
ಇದೊಂದು ಆಘಾತಕಾರಿ ಸಂಗತಿ. ಪ್ರೀತಿಯ ದಿನದಂದು ದ್ವೇಷ ತಲೆ ಎತ್ತಿದೆ. ಹುತಾತ್ಮ ಯೋಧ ಹಾಗೂ ಅವರ ಕುಟುಂಬಕ್ಕಾಗಿ ಪ್ರಾರ್ಥಿಸುತ್ತೇನೆ ಎಂದು ಅಭಿಷೇಕ್ ಬಚ್ಚನ್ ಹೇಳಿದ್ದಾರೆ.
ಈ ದಾಳಿಯನ್ನು ನಾವೆಂದೂ ಮರೆಯಲು ಬಿಡಬಾರದು. ಹುತಾತ್ಮ ಯೋಧರ ಆತ್ಮಕ್ಕೆ ಶಾಂತಿ ಸಿಗಲಿ. ಅವರ ಕುಟುಂಬದವರಿಗೆ ನೋವನ್ನು ಭರಿಸುವ ಶಕ್ತಿ ನೀಡಲಿ ಎಂದು ಅಕ್ಷಯ್ ಕುಮಾರ್ ಹೇಳಿದ್ದಾರೆ.
