ಅಂಬಿ ರಾಜಕಾರಣಿಯಾಗಿದ್ದರೂ ಪಕ್ಷಾತೀತವಾಗಿ ಫ್ರೆಂಡ್ಸ್ ಇದ್ದರು. ಸ್ಯಾಂಡಲ್‌ವುಡ್ ನಟನಾದರೂ ಎಲ್ಲ ಸಿನಿ ಕ್ಷೇತ್ರದವರೂ ಆತ್ಮೀಯರೇ. ಮರೆಯದ ಆತ್ಮಕ್ಕೆ ಬಾಲಿವುಡ್ ಬಿ ನಮಿಸಿದ್ದು ಹೇಗೆ?
ಗ್ಲೋಬಲ್ ಮ್ಯಾಪ್ ಹಿಡಿದು ಅಂಬಿಗೆ ಯಾವ ಜಾಗದಲ್ಲಿ ಫ್ರೆಂಡ್ಸ್ ಇಲ್ಲವೆಂಬುದನ್ನು ಹುಡುಕಬೇಕು. ಅಷ್ಟರ ಮಟ್ಟಿಗೆ ಜನರ ಜೊತೆ ಒಡನಾಟ ಇಟ್ಟುಕೊಂಡಿದ್ದರು ಸ್ಯಾಂಡಲ್‌ವುಡ್ ಬಿಗ್ ಬಾಸ್.
ಎಲ್ಲ ಭಾಷೆಯ ಚಿತ್ರರಂಗದವರನ್ನೂ ಆತ್ಮೀಯರೆಂದು ಸತ್ಕರಿಸುತ್ತಿದ್ದರು ಅಂಬರೀಷ್. ಮಾತೆಷ್ಟೇ ಒರಟಾದರೂ ಇವರಿಂದ ದೂರ ಹೋದವರೂ ಯಾರೂ ಇಲ್ಲ. ಎಲ್ಲ ಕ್ಷೇತ್ರದವರೊಂದಿಗೂ ಕಾರ್ಯನಿರ್ವಹಿಸಿದ ಅಂಬಿ, ಪ್ರತಿಯೊಬ್ಬರ ಸಾವಿಗೂ ಮರುಗುತ್ತಿದ್ದರು.
ಅಂಬಿ ಇನ್ನಿಲ್ಲ... ಸುದ್ದಿ ಕೇಳಿದಾಕ್ಷಣ ಬಚ್ಚನ್ ತಮ್ಮ ಟ್ವಿಟರ್‌ನಲ್ಲಿ ಸಂತಾಪ ಸೂಚಿಸಿದ್ದಾರೆ. ' ಒಡನಾಡಿ ಅಂಬರೀಷ್ ಅವರನ್ನು ಕಳೆದುಕೊಂಡು ಬೇಸರವಾಗಿದೆ, ಅವರ ಆತ್ಮಕ್ಕೆ ಶಾಂತಿ ಸಿಗಲಿ.' ಎಂದು ಪ್ರಾರ್ಥಿಸಿದ್ದಾರೆ.
ಅಂಬರೀಷ್ ಪಾರ್ಥಿವ ಶರೀರ ಮಂಡ್ಯ ಮಣ್ಣಿಗೆ ಗುಡ್ ಬೈ ಹೇಳಿ, ಕಂಠೀರವ ಸ್ಟೊಡಿಯೋಗೆ ಆಗಮಿಸುತ್ತಿದ್ದು, ಅಂತಿಮ ಸಂಸ್ಕಾರಕ್ಕೆ ಸಕಲ ಸಿದ್ಧತೆಗಳು ನಡೆಯುತ್ತಿವೆ. ಈಗಾಗಲೇ ಚಿರಂಜೀವಿ, ರಜಿನಿಕಾಂತ್ ಹಾಗೂ ಹಲವಾರು ಗಣ್ಯರು ಅಂಬಿಯ ಅಂತಿಮ ದರ್ಶನ ಪಡೆದಿದ್ದರು.
