ಅಭಿಮಾನಿ ಸೆಲ್ಫಿ ಕೇಳಿದ್ದಕ್ಕೆ ಸಿಡಿಮಿಡಿಗೊಂಡ ತಾಪ್ಸಿ ಪನ್ನು; ವಿಡಿಯೋ ನೋಡಿ
ಯುವಕನೋರ್ವ ನಟಿ ಬಳಿ ಬಂದು ಸೆಲ್ಫಿ ತೆಗೆದುಕೊಳ್ಳಲು ಪ್ರಯತ್ನಿದರು. ಈ ವೇಳೆ ಸಿಡಿಮಿಡಿಗೊಂಡ ತಾಸ್ಪಿ, ಪ್ಲೀಸ್ ದಾರಿ ಬಿಡಿ ಎಂದು ಕಾರ್ ಹತ್ತಿ ಹೊರಟು ಹೋದರು.
ಮುಂಬೈ: ತಮ್ಮ ನೆಚ್ಚಿನ ನಟ-ನಟಿಯರು ಕಂಡ ಕೂಡಲೇ ಅಭಿಮಾನಿಗಳು ಸೆಲ್ಫಿ (Fan Selfie) ತೆಗೆದುಕೊಳ್ಳೋದು ಸಾಮಾನ್ಯ. ಬಹುತೇಕ ಎಲ್ಲಾ ಬಾಲಿವುಡ್ ತಾರೆಯರ ವಾಸ ಮುಂಬೈ ನಗರಿಯಾಗಿದ್ದು, ರಸ್ತೆಯ ಇಕ್ಕೆಲಗಳಲ್ಲಿ ನಿಮಗೆ ಸ್ಟಾರ್ ಕಲಾವಿದರು ಕಾಣಿಸುತ್ತಾರೆ. ಸೆಲೆಬ್ರಿಟಿಗಳು ಹೆಚ್ಚಾಗ ಕಾಣಿಸಿಕೊಳ್ಳುವ ಸ್ಥಳದಲ್ಲಿ ಪಾಪರಾಜಿಗಳು ಸಹ ಕಂಡು ಬರುತ್ತಾರೆ. ಬಾಲಿವುಡ್ ನಟಿ ತಾಪ್ಸಿ ಪನ್ನು (Bollywood Actress Taapsee Pannu) ಅಭಿಮಾನಿಯೋರ್ವ ಸೆಲ್ಪಿ ಕೇಳಿದ್ದಕ್ಕೆ ಸಿಡಿಮಿಡಿಗೊಂಡಿದ್ದಾರೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ತಾಪ್ಸಿ ಪನ್ನು ನಗರದಲ್ಲಿ ಕಾಣಿಸಿಕೊಂಡಿದ್ದು, ಪಾಪಾರಜಿಗಳು ಸೇರಿದಂತೆ ಅಭಿಮಾನಿಗಳು ನಟಿಯನ್ನು ಸುತ್ತವರಿದಿದ್ದರು. ಎಂದಿನಂತೆ ಪಾಪರಾಜಿಗಳು ನಟಿಗೆ ಫೋಟೋಗೆ ಪೋಸ್ ನೀಡುವಂತೆ ಮನವಿ ಮಾಡಿಕೊಳ್ಳುತ್ತಿದ್ದಾರೆ. ಅಷ್ಟರಲ್ಲಿ ಯುವಕನೋರ್ವ ನಟಿ ಬಳಿ ಬಂದು ಸೆಲ್ಫಿ ತೆಗೆದುಕೊಳ್ಳಲು ಪ್ರಯತ್ನಿದರು. ಈ ವೇಳೆ ಸಿಡಿಮಿಡಿಗೊಂಡ ತಾಸ್ಪಿ, ಪ್ಲೀಸ್ ದಾರಿ ಬಿಡಿ ಎಂದು ಕಾರ್ ಹತ್ತಿ ಹೊರಟು ಹೋದರು.
ತಾಪ್ಸಿ ಪನ್ನು ಪ್ರಿಂಟೆಡ್ ಲೈಟ್ ಗ್ರೀನ್ ಶರ್ಟ್ ಮತ್ತು ವೈಟ್ ಸ್ಕರ್ಟ್ ಧರಿಸಿದ್ದರು. ಬುಧವಾರ ಸಂಜೆ ಈ ಘಟನೆ ನಡೆದಿದೆ. ನಟಿಯ ವರ್ತನೆಗೆ ಅಭಿಮಾನಿಗಳು ಬೇಸರ ಹೊರಹಾಕಿದ್ದಾರೆ. ಸಿನಿಮಾ ಪ್ರಚಾರದ ವೇಳೆ ಇವರಿಗೆ ಅಭಿಮಾನಿಗಳು ಬೇಕು. ಒಂದು ಸೆಲ್ಫಿ ಕೊಟ್ಟಿದ್ರೆ ಏನಾಗುತ್ತಿತ್ತು ಎಂದು ನೆಟ್ಟಿಗರು ಪ್ರಶ್ನೆ ಮಾಡುತ್ತಿದ್ದಾರೆ.
ಪಕ್ಕದಲ್ಲಿಯೇ ಸ್ಟಾರ್ ನಟಿ ಬಂದ್ರೂ ಕಣ್ಣೆತ್ತಿ ನೋಡದ ಸ್ವಿಗ್ಗಿ ಬಾಯ್‌ಗೆ ಫಿದಾ ಆದ ಜನರು
ಸದ್ದಿಲ್ಲದೇ ಮದುವೆಯಾದ ತಾಪ್ಸಿ ಪನ್ನು !
10 ವರ್ಷಗಳ ಡೇಟಿಂಗ್ ಬಳಿಕ, ಬ್ಯಾಡ್ಮಿಂಟನ್ ಆಟಗಾರ, ಕೋಚ್ ಮಥಾಯಿಸ್ ಬೋ (Mathias Boe) ಅವರ ಜೊತೆ ಮದುವೆಯಾಗುತ್ತಿದ್ದಾರೆ ಎಂದು ಬಹಳ ದಿನಗಳಿಂದ ಸುದ್ದಿಯಾಗಿತ್ತು. ಮಾರ್ಚ್ 23 ರಂದು ಉದಯಪುರದಲ್ಲಿ ತಾಪ್ಸಿ ಪನ್ನು ಮತ್ತು ಮಥಾಯಿಸ್ ಮದುವೆ ನಡೆದಿದೆ. ಮದುವೆ ಫೋಟೋಗಳು ಲೀಕ್ ಬಳಿಕ ಈ ಸುದ್ದಿ ತಿಳಿದಿತ್ತು. ಪಾರ್ಟಿಯಲ್ಲಿ ಆಪ್ತ ಸ್ನೇಹಿತರು ಮತ್ತು ಕುಟುಂಬದವರು ಮಾತ್ರ ಭಾಗವಹಿಸಿದ್ದರು. ಅನುರಾಗ್ ಕಶ್ಯಪ್ ಮತ್ತು ಕನಿಕಾ ಧಿಲ್ಲೋನ್ ಕೆಲವರಿಗೆ ಮಾತ್ರ ಮದುವೆಗೆ ಆಹ್ವಾನ ನೀಡಲಾಗಿತ್ತು. ನಾನು ನನ್ನ ವೈಯಕ್ತಿಕ ಜೀವನವನ್ನು ಪಬ್ಲಿಕ್ ಮಾಡಲು ಇಷ್ಟಪಡುವುದಿಲ್ಲ. ನನ್ನ ಸಂಗಾತಿ ಮತ್ತು ನನ್ನ ಮದುವೆ ಎರಡೂ ವೈಯಕ್ತಿಕವಾದದ್ದು. ಅದನ್ನು ಸಾರ್ವಜನಿಕಗೊಳಿಸುವ ಇಚ್ಛೆ ನನಗೆ ಇಲ್ಲ ಎಂದು ಸಂದರ್ಶನವೊಂದರಲ್ಲಿ ತಾಪ್ಸಿ ಪನ್ನು ಹೇಳಿಕೊಂಡಿದ್ದರು.
ರಾಜಕುಮಾರ ಸಿಗುವ ಮೊದಲು ಹಲವು ಕಪ್ಪೆಗಳಿಗೆ ಮುತ್ತಿಕ್ಕಿದ್ದೇನೆ ಎಂದ ನಟಿ ತಾಪ್ಸಿ ಪನ್ನು
‘ಏಲಿಯನ್’, ‘ಜನ ಗಣ ಮನ’, ‘ಓ ಲಡ್ಕಿ ಹೈ ಕಹಾ’, ‘ಫಿರ್ ಆಯಿ ಹಸೀನ್ ದಿಲ್ರುಬಾ’, 'ತಪ್ಪಡ್' ಸೇರಿದಂತೆ ತೆಲುಗು ಮತ್ತು ತಮಿಳು ಸಿನಿಮಾಗಳಲ್ಲಿತಯೂ ತಾಪ್ಸಿ ಪನ್ನು ನಟಿಸಿದ್ದಾರೆ.