ಬಾಲಿವುಡ್ 'ದಬಾಂಗ್ ' ಬೆಡಗಿ ಸೋನಾಕ್ಷಿ ಸಿನ್ಹಾ ವಿರುದ್ಧ ವಂಚನೆ ಆರೋಪ ಕೇಳಿ ಬಂದಿದ್ದು ಅದಕ್ಕೆ ಸೋನಾಕ್ಷಿ ಸಿನ್ಹಾ ಟ್ಟಿಟ್ಟರ್ ಖಾತೆಯಲ್ಲಿ ಸ್ಪಷ್ಟನೆ ಕೊಟ್ಟಿದ್ದಾರೆ.
ಬೇಬಿ ಬೇಡಿ ದೆಹಲಿಯ ಖಾಸಗಿ ಕಾರ್ಯಕ್ರಮದಲ್ಲಿ ಭಾಗಿಯಾಗುವುದಾಗಿ ಕಾರ್ಯಕ್ರಮದ ಆಯೋಜಕರ ಬಳಿ 24 ಲಕ್ಷ ರೂಪಾಯಿ ಮುಂಗಡ ಹಣ ಪಡೆದಿದ್ದು ಭಾಗಿಯಾಗದೇ ಮೋಸ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿತ್ತು.
ಕಾರ್ಯಕ್ರಮದ ಆಯೋಜಕರ ದೂರಿನನ್ವಯ ಸ್ಪಷ್ಟನೆ ಹಾಗೂ ವಿಚಾರಣೆಗಾಗಿ ಸೋನಾಕ್ಷಿ ನಿವಾಸಕ್ಕೆ ಪೊಲೀಸರು ಭೇಟಿ ನೀಡಿದ್ದು ನಟಿ ಮನೆಯಲ್ಲಿ ಇಲ್ಲವೆಂದು ಹಿಂತಿರುಗಿದ್ದಾರೆ.
ವಿಚಾರ ತಿಳಿಯುತ್ತಿದ್ದಂತೆ ಸೋನಾಕ್ಷಿ 'ಒಂದು ಸಂಸ್ಥೆ ತನ್ನ ಕರ್ತವ್ಯ ವಹಿಸಲು ವಿಫಲರಾದಾಗ ಇಂತಹ ಆರೋಪ ಮಾಡುತ್ತಾರೆ. ನನ್ನ ಹೆಸರಿಗೆ ಮಸಿ ಬಳೆಯಬೇಕೆಂದು ಇಂತಹ ಆರೋಪ ಮಾಡಿದ್ದಾರೆ. ಈ ಪ್ರಕರಣದ ವಿಚಾರಣೆಗೆ ಪೊಲೀಸರಿಗೆ ನನ್ನ ಸಂಪೂರ್ಣ ಬೆಂಬಲವಿದೆ. ದಯವಿಟ್ಟು ಮಾಧ್ಯಮದವರು ಇಂತಹ ಸುಳ್ಳು ಸುದ್ದಿಯನ್ನು ಪ್ರಸಾರ ಮಾಡಬೇಡಿ' ಎಂದು ಟ್ಟಿಟ್ಟರ್‌ನಲ್ಲಿ ಬರೆದುಕೊಂಡಿದ್ದಾರೆ.
