ಬಾಲಿವುಡ್ ಸೆಕ್ಸಿ ಕ್ವೀನ್ ಸಿನಿಮಾಗಳು ಸುದ್ದಿಯಾಗುತ್ತೋ ಇಲ್ವೋ ಆದರೆ ಅವರು ಮಾಡುವ ಕೆಲಸಗಳಂತೂ ಬೇಗ ಸುದ್ದಿಯಾಗಿ ಬಿಡುತ್ತೆ. 

ರಾಖಿ ಸಾವಂತ್ ಎನ್ ಆರ್ ಐಯೊಬ್ಬರನ್ನು ಗುಟ್ಟಾಗಿ ಮದುವೆಯಾಗಿದ್ದಾರೆ ಎಂಬ ಸುದ್ಧಿ ಸದ್ದು ಮಾಡುತ್ತಿದೆ. ಮುಂಬೈನ ಜೆಡಬ್ಲೂ ಮ್ಯಾರಿಯೆಟ್ ಹೊಟೇಲ್ ನಲ್ಲಿ ಜುಲೈ 28 ರಂದು ಸ್ನೇಹಿತರು, ಕುಟುಂಬಸ್ಥರ ಸಮ್ಮುಖದಲ್ಲಿ ಮದುವೆಯಾಗಿದ್ದಾರೆ ಎನ್ನಲಾಗಿದೆ. 

 

 
 
 
 
 
 
 
 
 
 
 
 
 

bridel shooting

A post shared by Rakhi Sawant (@rakhisawant2511) on Jul 29, 2019 at 2:23am PDT

ಆದರೆ ಈ ಸುದ್ಧಿಯನ್ನು ರಾಖಿ ಸಾವಂತ್ ತಳ್ಳಿ ಹಾಕಿದ್ದಾರೆ. ಹೊಟೇಲ್ ಮ್ಯಾರಿಯೆಟ್ ನಲ್ಲಿ ಬ್ರೈಡಲ್ ಫೋಟೋಶೂಟ್ ಮಾಡಿಸುತ್ತಿದ್ದೆ. ಯಾಕೆ ನಾನು ಮದುವೆಯಾಗುತ್ತಿದ್ದೇನೆ ಎಂದೆಲ್ಲಾ ಸುಳ್ಳು ಸುದ್ಧಿ ಹಬ್ಬಿಸುತ್ತಾರೋ ಗೊತ್ತಿಲ್ಲ. ನಾನು ಮದುವೆಯಾಗಿಲ್ಲ. ರಿಲೇಶನ್ ಷಿಪ್ ನಲ್ಲಿಯೂ ಇಲ್ಲ. ನಾನಿನ್ನೂ ಸಿಂಗಲ್’ ಎಂದು ಸ್ಪಷ್ಟೀಕರಣ ಕೊಟ್ಟಿದ್ದಾರೆ. 

ಬಿಳಿ ಬಣ್ಣದ ಗೌನ್ ಧರಿಸಿ ರಾಖಿ ಸಾವಂತ್ ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ.