ಇದೇ ರೀತಿ ಈಗ ಪ್ರಿಯಾಂಕಾ ಚೋಪ್ರಾ ಮೊನ್ನೆ ಸೆ.16ರಂದು ಹುಟ್ಟು ಹಬ್ಬ ಆಚರಿಸಿಕೊಂಡ ತನ್ನ ಪತಿ ನಿಕ್‌ಜಾನ್ಸ್‌ ಹುಟ್ಟುಹಬ್ಬಕ್ಕೆ ಶುಭಾಷಯ ಕೋರಿರುವ ರೀತಿ ಸುಂದರವಾಗಿದೆ. ನಿಕ್‌ ಹಾಡಿರುವ ಚೆಂದದ ಹಾಡಿಗೆ ತಾವಿಬ್ಬರೂ ಜೊತೆಯಾಗಿ ಇರುವ ರೋಮಾಂಚಕ ಕ್ಷಣಗಳ ತುಣುಕುಗಳನ್ನು ಪೋಣಿಸಿ ಮೂರು ನಿಮಿಷಗಳ ವಿಡಿಯೋ ಒಂದನ್ನು ಸೋಷಲ್‌ ಮೀಡಿಯಾದಲ್ಲಿ ಹಾಕಿ, ಪ್ರಿಯ ಹೃದಯಕ್ಕೆ ಮನದಾಳದಿಂದ ವಿಶ್‌ ಮಾಡಿದ್ದಾರೆ ಪ್ರಿಯಾಂಕಾ.

ಪ್ರಿಯಾಂಕ- ನಿಕ್ ಬೆಡ್‌ರೂಮ್ ಸೀಕ್ರೆಟ್ ರಿವೀಲ್!

‘ನನ್ನ ಬಾಳಿನ ಬೆಳಕೇ, ನೀನು ಜೊತೆ ಇರುವ ಪ್ರತಿ ಕ್ಷಣವೂ ಸುಂದರ. ನನ್ನ ಪಾಲಿನ ಸಂತೋಷಕ್ಕೆಲ್ಲಾ ನೀನೇ ಕಾರಣಿಗ. ನೀನು ನನ್ನವನಾಗಿದ್ದಕ್ಕೆ ಥ್ಯಾಂಕ್ಸ್‌. ಹ್ಯಾಪಿ ಬತ್‌ರ್‍ ಡೇ, ಲವ್‌ ಯೂ’ ಹೀಗೊಂದು ಒಕ್ಕಣೆ ಬರೆದು ಅಂದವಾಗಿ ಸಂಗಾತಿಗೆ ಬತ್‌ರ್‍ ಡೇ ವಿಶ್‌ ಮಾಡಿದ್ದಾರೆ ಪ್ರಿಯಾಂಕಾ.