Asianet Suvarna News Asianet Suvarna News

13 ಲಕ್ಷ ಮೌಲ್ಯದ ಲಕ್ಸುರಿ ಬ್ಯಾಗ್ ಜೊತೆ ಏರ್‌ಪೋರ್ಟ್‌ನಲ್ಲಿ ಕಾಣಿಸಿಕೊಂಡ ಗರ್ಭಿಣಿ ಅನುಷ್ಕಾ

ವಿರಾಟ್ ಕೊಹ್ಲಿ ಪತ್ನಿ ನಟಿ ಅನುಷ್ಕಾ ಶರ್ಮಾ ಅವರನ್ನು ಏರ್ಪೋರ್ಟ್‌ನಲ್ಲಿ ಪಪಾರಾಜಿಗಳು ಸತಮ್ಮ ಕ್ಯಾಮರಾದಲ್ಲಿ ಸೆರೆ ಹಿಡಿದಿದ್ದು, ಈ ವೇಳೆ ನಟಿ  ಸುಮಾರು 13 ಲಕ್ಷ ರೂ ಮೌಲ್ಯದ ಬ್ರಾಂಡೆಡ್ ಬ್ಯಾಗ್ ಧರಿಸಿದ್ದು ಎಲ್ಲರ ಗಮನ ಸೆಳೆದಿದೆ. 

Bollywood Actress Anushka Sharma appeared at the airport with a bag worth 13 lakhs netizens says pragnenncy confirmed akb
Author
First Published Dec 17, 2023, 12:08 PM IST

ವಿರಾಟ್ ಕೊಹ್ಲಿ ಪತ್ನಿ ನಟಿ ಅನುಷ್ಕಾ ಶರ್ಮಾ ಅವರನ್ನು ಏರ್ಪೋರ್ಟ್‌ನಲ್ಲಿ ಪಪಾರಾಜಿಗಳು ಸತಮ್ಮ ಕ್ಯಾಮರಾದಲ್ಲಿ ಸೆರೆ ಹಿಡಿದಿದ್ದು, ಈ ವೇಳೆ ನಟಿ  ಸುಮಾರು 13 ಲಕ್ಷ ರೂ ಮೌಲ್ಯದ ಬ್ರಾಂಡೆಡ್ ಬ್ಯಾಗ್ ಧರಿಸಿದ್ದು ಎಲ್ಲರ ಗಮನ ಸೆಳೆದಿದೆ. ಕಾರಿನಿಂದ ಇಳಿಯುತ್ತಿದ್ದ ಅನುಷ್ಕಾ ಅವರು ತನಗಿಂತ ದೊಡ್ಡ ಗಾತ್ರದ ಜಾಕೆಟ್ ಧರಿಸಿದ್ದು, ಇದರಿಂದಲೇ ತಮ್ಮ  ಹೊಟ್ಟೆಯನ್ನು ಮುಚ್ಚಿಕೊಂಡಿದ್ದು, ಕಂಡು ಬಂತು. ಇದೇ ವೇಳೆ ಅವರು ಧರಿಸಿದ್ದ ಬ್ಯಾಗ್ ಎಲ್ಲರ ಕಣ್ಣನ್ನು ಕುಕ್ಕಿದ್ದು,  ಅನುಷ್ಕಾ ಧರಿಸಿದ ದುಬಾರಿ ಕ್ಯಾನ್ವಾಸ್‌ ಬ್ಯಾಗ್ ಫೆಂಡಿ ಬ್ರಾಂಡ್‌ದಾಗಿದ್ದು, ಇದರ ದರ ಸುಮಾರು 13 ಲಕ್ಷದ 3 ಸಾವಿರದ 293 ಎಂಬುದು ನೆಟ್ಟಿಗರ ಹುಬ್ಬೇರುವಂತೆ ಮಾಡಿದೆ.

ಅನುಷ್ಕಾ ಹಾಗೂ ವಿರಾಟ್ ಕೊಹ್ಲಿ ಇತ್ತೀಚೆಗಷ್ಟೇ ಸ್ನೇಹಿತರ ಜೊತೆ ವಿದೇಶದಲ್ಲಿ ತಮ್ಮ 6ನೇ ವರ್ಷದ ವಿವಾಹ ವಾರ್ಷಿಕೋತ್ಸವವನ್ನು ಆಚರಿಸಿಕೊಂಡಿದ್ದರು. ನವೆಂಬರ್‌ನಲ್ಲಿ ನಡೆದ ವಿಶ್ವಕಪ್ ಪಂದ್ಯಾವಳಿ ವೇಳೆ ಸ್ಟೇಡಿಯಂನಲ್ಲಿ ಕಾಣಿಸಿಕೊಂಡಿದ್ದ ಅನುಷ್ಕಾ  ಹೂಗಳ ಪ್ರಿಂಟ್ ಇದ್ದ ಫ್ಲೋರಲ್ ಡ್ರೆಸ್ ಧರಿಸಿ ಬಿಳಿ ಬಣ್ಣದ ಸನ್‌ಗ್ಲಾಸ್ ಧರಿಸಿ ಅಮ್ಮನೊಂದಿಗೆ ಕುಳಿತುಕೊಂಡಿದ್ದರು.  ನವೆಂಬರ್ 9 ರಂದು ಅನುಷ್ಕಾ ಶರ್ಮಾ  ಅವರ ಬೇಬಿ ಬಂಪ್ ಸಪಷ್ಟವಾಗಿ ಕಾಣಿಸುವ ವೀಡಿಯೋವೊಂದು ರೆಡಿಟ್‌ನಲ್ಲಿ ವೈರಲ್ ಆಗಿತ್ತು. 

ಅನುಷ್ಕಾ ಶರ್ಮಾ ಬೇಬಿ ಬಂಪ್​ ಷೋ ಹಿಂದೆ ಇಷ್ಟೆಲ್ಲಾ ಕಥೆಯಿದ್ಯಾ? ಫೋಟೋದ ಅಸಲಿಯತ್ತೇನು?

2013ರಲ್ಲಿ ಜಾಹೀರಾತೊಂದರ ಶೂಟಿಂಗ್ ವೇಳೆ ಪರಸ್ಪರ ಪರಿಚಯವಾದ ಅನುಷ್ಕಾ ಹಾಗೂ ವಿರಾಟ್ ಕೊಹ್ಲಿ ಸ್ನೇಹ ನಂತರ ಪ್ರೇಮವಾಗಿ ಬದಲಾಗಿತ್ತು. ಈ ಜೋಡಿ 2017ರ ಡಿಸೆಂಬರ್ 11 ರಂದು ಮದುವೆಯಾಗುವ ಮೂಲಕ ಪ್ರೀತಿಗೆ ದಾಂಪತ್ಯದ ಮುದ್ರೆಯೊತ್ತಿದ್ದರು. ಕ್ರಿಕೆಟ್ ಹಾಗೂ ಬಾಲಿವುಡ್ ತಾರೆಯರು ಮೇಳೈಸಿದ ಇವರ ಅದ್ದೂರಿ ವಿವಾಹ ಇಟಲಿಯಲ್ಲಿ ನಡೆದಿತ್ತು. ಮದುವೆಯ ನಂತರ ಆಗಾಗ ತಮ್ಮಿಬ್ಬರ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡುತ್ತಿರುವ ಈ ಜೋಡಿ ಕೋಟ್ಯಾಂತರ ಅಭಿಮಾನಿಗಳನ್ನು ಹೊಂದಿದ್ದಾರೆ.

 2021ರಲ್ಲಿ ಮಗಳು ವಂಶಿಕಾರನ್ನು ಸ್ವಾಗತಿಸಿದ ಈ ದಂಪತಿ ಈಗ ಮತ್ತೊಂದು ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಈ ವಿಚಾರ ಈ ಹಿಂದೆ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿದ್ದವು. ಇನ್ನು ಏರ್‌ಪೋರ್ಟ್‌ನಲ್ಲಿ  ತನಗಿಂತ ದೊಡ್ಡ ಜಾಕೆಟ್ ಜೊತೆ ಕಾಣಿಸಿಕೊಂಡ ಅನುಷ್ಕಾ ಶರ್ಮಾ ನೋಡಿದ ನೆಟ್ಟಿಗರು ಆಕೆ ಗರ್ಭಿಣಿಯಾಗಿರುವುದು ಖಚಿತವಾಗಿ ಕಾಣುತ್ತಿದೆ ಎಂದು ಕಾಮೆಂಟ್ ಮಾಡಿದ್ದಾರೆ. 

ಕೊಹ್ಲಿ ಅನುಷ್ಕಾ ದಂಪತಿ ಪೈಕಿ ಯಾರ ಬಳಿ ಇದೇ ಅತೀ ಹೆಚ್ಚು ದುಬಾರಿ ಕಾರು?


 

Follow Us:
Download App:
  • android
  • ios