ಬಾಲಿವುಡ್ ಸುಂದರಿ ಮಂಗಳೂರು ಚೆಲುವೆ ಐಶ್ವರ್ಯ ರೈ 2007ರಲ್ಲಿ ನಟ ಅಭಿಷೇಕ್ ಬಚ್ಚನ್ ಜೊತೆ ದಾಂಪತ್ಯ ಜೀವನ ಶುರು ಮಾಡಿದ್ದು ತಮ್ಮ ಜೀವನವನ್ನು ಇನ್ನಷ್ಟು ಕಲರ್ ಫುಲ್ ಮಾಡಲು 2011 ರಲ್ಲಿ ಲಿಟಲ್ ಐಶ್ವರ್ಯ ಅಂದ್ರೆ ಅರಾಧ್ಯಾ ಬಚ್ಚನ್ ಜನ್ಮ ನೀಡಿದರು.

ಈಗ ಆರಾಧ್ಯ ಜೊತೆ ಆಡಲು ಮನೆಗೆ ಮತ್ತೊಬ್ಬ ಅತಿಥಿ ಆಗಮನವಾಗಲಿದೆ ಎಂಬ ವಂದಂತಿ ಹರಿದಾಡುತ್ತಿದೆ, ಹೇಗೆ ಅಂತೀರಾ?

ಕೆಲ ದಿನಗಳ ಹಿಂದೆ ಹಾಲಿಡೆ ಟೂರ್ ಎಂದು ಗೋವಾ ಬೀಚ್ ನಲ್ಲಿ ಕಾಣಿಸಿಕೊಂಡ ಈ ಜೋಡಿ ಫೋಟೋ ವೈರಲ್ ಆಗಿತ್ತು. ಈ ಫೋಟೋದಲ್ಲಿ ಸ್ವಲ್ಪ ಹೊಟ್ಟೆ ಕಾಣುತ್ತದೆ. ಇದನ್ನು ಕಂಡ ಫ್ಯಾನ್ ಗಳು ಐಶು ಪ್ರೆಗ್ನೆಂಟ್ ಆಗಿದ್ದಾರೆ ಎಂದು ಮಾತನಾಡಿಕೊಳ್ಳುತ್ತಿದ್ದಾರೆ. ಇದರ ಬಗ್ಗೆ ಯಾವುದೇ ಹೇಳಿಕೆಯನ್ನು ಬಚ್ಚನ್ ಕುಟುಂಬ ನೀಡಿಲ್ಲ.