ಕನ್ನಡ ಚಿತ್ರರಂಗಕ್ಕೆ ಸುನೀಲ್ ಶೆಟ್ಟಿ ಆಗಮನ

Bollywood Actor Sunil Shetty act in Sandalwood
Highlights

ಕಿಚ್ಚ ಸುದೀಪ್ ಅಭಿನಯದ ‘ಪೈಲ್ವಾನ್’  ಚಿತ್ರದಲ್ಲಿ ಸುನೀಲ್ ಶೆಟ್ಟಿ. ಇದು ಅಧಿಕೃತ. ಮೇ.೧೭ರಿಂದ ಕೃಷ್ಣ ನಿರ್ದೇಶನದ ಈ ಚಿತ್ರಕ್ಕೆ ಚಿತ್ರೀಕರಣ ಆರಂಭವಾಗಲಿದೆ. ವಿಲನ್ ಪಾತ್ರಕ್ಕೆ ಕಬೀರ್  ದುಹಾನ್ ಸಿಂಗ್ ಇದ್ದಾರೆ. ನಾಯಕಿ ಪಾತ್ರಕ್ಕೆ ಆಕಾಂಕ್ಷ ಸಿಂಗ್ ಬಂದಿದ್ದಾರೆ.

ಬೆಂಗಳೂರು (ಮೇ. 16): ಕಿಚ್ಚ ಸುದೀಪ್ ಅಭಿನಯದ ‘ಪೈಲ್ವಾನ್’  ಚಿತ್ರದಲ್ಲಿ ಸುನೀಲ್ ಶೆಟ್ಟಿ. ಇದು ಅಧಿಕೃತ. ಮೇ.೧೭ರಿಂದ ಕೃಷ್ಣ ನಿರ್ದೇಶನದ ಈ ಚಿತ್ರಕ್ಕೆ ಚಿತ್ರೀಕರಣ ಆರಂಭವಾಗಲಿದೆ. ವಿಲನ್ ಪಾತ್ರಕ್ಕೆ ಕಬೀರ್  ದುಹಾನ್ ಸಿಂಗ್ ಇದ್ದಾರೆ. ನಾಯಕಿ ಪಾತ್ರಕ್ಕೆ ಆಕಾಂಕ್ಷ ಸಿಂಗ್ ಬಂದಿದ್ದಾರೆ.

ಈಗಿನ ದೊಡ್ಡ ಸುದ್ದಿ ಏನೆಂದರೆ ಸುನೀಲ್ ಶೆಟ್ಟಿ ಇದೇ ಮೊದಲ ಬಾರಿಗೆ ಪೈಲ್ವಾನ್ ಮೂಲಕ ಕನ್ನಡ ಚಿತ್ರರಂಗಕ್ಕೆ ಬಂದಿದ್ದಾರೆ. ಈ ಬೆಳವಣಿಗೆಗೆ ಕಾರಣ ಸುದೀಪ್ ಮತ್ತು ಸುನೀಲ್ ಶೆಟ್ಟಿ ಮಧ್ಯೆ ಇರುವ ಸ್ನೇಹ. ಆ ಸ್ನೇಹಕ್ಕೆ ಕಾರಣವೇ ಕ್ರಿಕೆಟ್. ಸೆಲೆಬ್ರಿಟಿ ಕ್ರಿಕೆಟ್ ಲೀಗ್‌ನಿಂದಾಗಿ ಸುದೀಪ್ ಸಲ್ಮಾನ್ ಖಾನ್ ಸಹೋದರರು ಸೇರಿದಂತೆ ಸುನೀಲ್ ಶೆಟ್ಟಿ ಜೊತೆಗೆ ಆತ್ಮೀಯ ಸಂಬಂಧ ಹೊಂದಿದ್ದಾರೆ. ಈ ಬಾಂಧವ್ಯವೇ ಸುನೀಲ್ ಶೆಟ್ಟಿ ಅವರನ್ನು ಕನ್ನಡಕ್ಕೆ ಕರೆದು ತಂದಿದೆ.

ಸುನೀಲ್ ಶೆಟ್ಟಿ ಈ ಹಿಂದೆಯೇ  ಕನ್ನಡ ಚಿತ್ರವೊಂದರಲ್ಲಿ ನಟಿಸಬೇಕಿತ್ತು. ಆದರೆ  ಅದು ಕಾರಣಾಂತ ರಗಳಿಂದ ನಿಂತು ಹೋಗಿತ್ತು.  ಈಗ ‘ಪೈಲ್ವಾನ್’ ಚಿತ್ರದಿಂದಾಗಿ ಮಂಗಳೂರು  ಮೂಲದ ಕಲಾವಿದ ಕನ್ನಡ ಚಿತ್ರರಂಗಕ್ಕೆ ಬರುವಂತಾಗಿದೆ. ವಿಲನ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ. 

loader