ಎರಡು ಬಾಳೆಹಣ್ಣಿನ ಬೆಲೆ ಎಷ್ಟಾಗಬಹುದು? ಬರೋಬ್ಬರಿ 445 ರೂ! ಅರೇ, ಎರಡು ಬಾಳೆಹಣ್ಣಿಗೆ ಇಷ್ಟೊಂದು ಬೆಲೆನಾ? ಹಣ್ಣುಗಳನ್ನು ತಿನ್ನೋಕಾಗಲ್ಲ ಬೆಲೆ ಗಗನಕ್ಕೇರಿದೆ ಅಂತ ಅಂದ್ಕೋಬೇಡಿ. 

ನಟರೊಬ್ಬರು ಹೊಟೇಲ್ ನಲ್ಲಿ ಎರಡು ಬಾಳೆಹಣ್ಣು ಆರ್ಡರ್ ಮಾಡಿದ್ದಾರೆ. ಅದರ ಜೊತೆಗಿದ್ದ 445 ರೂ ಬಿಲ್ ನೋಡಿ ದಂಗಾಗಿದ್ದಾರೆ! 

ಬಾಲಿವುಡ್ ನಟ ರಾಹುಲ್ ಬೋಸ್ ವ್ಯಾಯಾಮ ಮುಗಿಸಿ ಎರಡು ಬಾಳೆಹಣ್ಣಿಗೆ ಆರ್ಡರ್ ಮಾಡಿದ್ದಾರೆ. ಎರಡು ಬಾಳೆಹಣ್ಣಿಗೆ 445 ರೂ ಬಿಲ್ ಆಗಿದೆ. 

 

ನೀವಿದನ್ನು ನಂಬಲೇಬೇಕು. ಯಾರು ಹೇಳಿದ್ದು ಹಣ್ಣುಗಳು ಆರೋಗ್ಯಕ್ಕೆ ಹಾನಿಕರವಲ್ಲವೆಂದು? ಎಂದು ಹೊಟೇಲ್ ನ್ನು ಟ್ಯಾಗ್ ಮಾಡಿ ವ್ಯಂಗ್ಯವಾಡಿದ್ದಾರೆ.