ಬೆಂಗಳೂರು :  ನವೆಂಬರ್ 24 ರಂದು ನಿಧನರಾದ ಸ್ಯಾಂಡಲ್ ವುಡ್ ರೆಬೆಲ್ ಸ್ಟಾರ್ ಅಂಬರೀಶ್ ಕುಟುಂಬವನ್ನು ಬಾಲಿವುಡ್ ನಟ ಅರ್ಬಾಜ್ ಖಾನ್ ಭೇಟಿ ಮಾಡಿ ಸಾಂತ್ವನ ಹೇಳಿದ್ದಾರೆ. 

ಅಂಬರೀಶ್ ವರ ನಿವಾಸಕ್ಕೆ ತೆರಳಿದ ಸಲ್ಮಾನ್ ಖಾನ್ ಸಹೋದರ ಬಾಲಿವುಡ್ ನಟ ಹಾಗೂ ನಿರ್ದೇಶಕ ಅರ್ಬಾಜ್ ಖಾನ್,  ಅಂಬಿ ಪತ್ನಿ ಸುಮಲತಾ ಅವರನ್ನು ಭೇಟಿ ಮಾಡಿದರು. 

ಬೆಂಗಳೂರಿಗೆ ಖಾಸಗಿ  ಕಾರ್ಯಕ್ರಮಕ್ಕೆಂದು ಆಗಮಿಸಿದ್ದ ಅರ್ಬಾಜ್ ಖಾನ್ ಬೆಂಗಳೂರಿನ ಸ್ಯಾಂಕಿ ರಸ್ತೆಯ ಅಪಾರ್ಟ್ ಮೆಂಟ್ ನಲ್ಲಿರುವ ದಿವಂಗತ ಅಂಬರೀಶ್ ನಿವಾಸಕ್ಕೆ ತೆರಳಿ ಅಂಬರೀಶ್ ಅವರಿಗೆ ಗೌರವ ಸಲ್ಲಿಸಿದರು.

ಕಳೆದ ನವೆಂಬರ್ 24ರ ರಾತ್ರಿ ಅನಾರೋಗ್ಯದಿಂದ ಕುಸಿದು ಬಿದ್ದಿದ್ದರು. ಬಳಿಕ  ಅವರನ್ನು ಆಸ್ಪತ್ರೆಗೆ ದಾಗಿಸಲಾಗಿದ್ದು, ಚಿಕಿತ್ಸೆ ಫಲಿಸದೇ ನಿಧನರಾಗಿದ್ದರು.