Asianet Suvarna News Asianet Suvarna News

ಕಾಶ್ಮೀರ್‌ ಫೈಲ್ಸ್‌ ವಿರೋಧಿಸಿದವರಿಂದ ಕೇರಳ ಸ್ಟೋರಿಗೂ ವಿರೋಧ: ಅನುಪಮ್‌ ಖೇರ್‌

2022ರಲ್ಲಿ ವಿವೇಕ್‌ ಅಗ್ನಿಹೋತ್ರಿಯ 'ಕಾಶ್ಮೀರ್‌ ಫೈಲ್ಸ್‌' ವಿರೋಧಿಸಿದ ಅದೇ ಜನರೇ ಇಂದು ಸುದೀಪ್ತೋ ಸೇನ್‌ ನಿರ್ದೇಶನದ ‘ದ ಕೇರಳ ಸ್ಟೋರಿ’ ಚಿತ್ರವನ್ನು ವಿರೋಧಿಸುತ್ತಿದ್ದಾರೆ. ಅವರೆಲ್ಲ ಒಂದೇ ಮುಖಗಳು’ ಎಂದು ಕಾಶ್ಮೀರ್‌ ಫೈಲ್ಸ್‌ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದ ನಟ ಅನುಪಮ್‌ ಖೇರ್‌ ಹೇಳಿದ್ದಾರೆ. 

Bollywood Actor Anupam Kher said that who opposed Kashmir Files On that day they only now opposing Kerala Story akb
Author
First Published May 10, 2023, 11:23 AM IST

ನವದೆಹಲಿ: 2022ರಲ್ಲಿ ವಿವೇಕ್‌ ಅಗ್ನಿಹೋತ್ರಿಯ 'ಕಾಶ್ಮೀರ್‌ ಫೈಲ್ಸ್‌' ವಿರೋಧಿಸಿದ ಅದೇ ಜನರೇ ಇಂದು ಸುದೀಪ್ತೋ ಸೇನ್‌ ನಿರ್ದೇಶನದ ‘ದ ಕೇರಳ ಸ್ಟೋರಿ’ ಚಿತ್ರವನ್ನು ವಿರೋಧಿಸುತ್ತಿದ್ದಾರೆ. ಅವರೆಲ್ಲ ಒಂದೇ ಮುಖಗಳು’ ಎಂದು ಕಾಶ್ಮೀರ್‌ ಫೈಲ್ಸ್‌ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದ ನಟ ಅನುಪಮ್‌ ಖೇರ್‌ ಹೇಳಿದ್ದಾರೆ. ಸಂದರ್ಶನವೊಂದರಲ್ಲಿ ಮಾತನಾಡಿದ ಅವರು ‘ನಾನು ಇನ್ನೂ ಸಿನಿಮಾ ವೀಕ್ಷಿಸಿಲ್ಲ. ಆದರೆ ಜನರು ನೈಜತೆಗೆ ಹತ್ತಿರವಿರುವಂತಹ ಇಂತಹ ಸಿನಿಮಾಗಳನ್ನು ಮಾಡುತ್ತಿರುವುದಕ್ಕೆ ನನಗೆ ಸಂತೋಷವಿದೆ. ಹಾಗೂ ಇಂತಹ ಚಿತ್ರಗಳನ್ನು ಪ್ರಚಾರ ಎನ್ನುವ ಜನರು ತಮಗೆ ಪರಿಪೂರ್ಣವೆನಿಸಿದ ವಿಷಯವನ್ನು ಹುಡುಕಿ ಸಿನಿಮಾ ಮಾಡಬಹುದು. ಯಾರೂ ಅವರನ್ನು ತಡೆಯುತ್ತಿಲ್ಲ ಎಂದಿದ್ದಾರೆ.

ಉ.ಪ್ರ., ಉತ್ತರಾಖಂಡದಲ್ಲಿ ಕೇರಳ ಸ್ಟೋರಿ ತೆರಿಗೆ ಮುಕ್ತ

ಇತ್ತ ದಿ ಕೇರಳ ಸ್ಟೋರಿ ಚಿತ್ರ ಉತ್ತರ ಪ್ರದೇಶದಲ್ಲಿ ಹಾಗೂ ಉತ್ತರಾಖಂಡದಲ್ಲಿ ತೆರಿಗೆ ಮುಕ್ತವಾಗಲಿವೆ ಎಂದು ಅಲ್ಲಿನ ಸರ್ಕಾರಗಳು ಘೋಷಿಸಿವೆ. ಇದರೊಂದಿಗೆ ಮಧ್ಯಪ್ರದೇಶ ಬಳಿಕ ಚಿತ್ರಕ್ಕೆ ಇನ್ನೂ 2 ರಾಜ್ಯಗಳು ತೆರಿಗೆ ವಿನಾಯ್ತಿ ನೀಡಿದಂತಾಗಿದೆ. ಈ ನಡುವೆ ಲಖನೌನಲ್ಲಿ ಚಿತ್ರದ ವಿಶೇಷ ಪ್ರದರ್ಶನಕ್ಕೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಆಗಮಿಸಿ, ಚಿತ್ರ ವೀಕ್ಷಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

The Kerala Story ಚಿತ್ರ ನಿಷೇಧ ಮಾಡಿದ ಪಶ್ಚಿಮ ಬಂಗಾಳ, ದೀದಿ ವಿರುದ್ಧ ಬೀದಿಗಿಳಿದ ಬಿಜೆಪಿ!

ಆದರೆ ಯೋಗಿಗೆ ಪ್ರತಿಕ್ರಿಯಿಸಿರುವ ಸಮಾಜವಾದಿ ಪ್ರಧಾನ ಕಾರ್ಯದರ್ಶಿ ಶಿವಪಾಲ್‌ ಸಿಂಗ್‌ ಯಾದವ್‌ (Shivpal singh yadhav) ‘ಮನರಂಜನೆಯನ್ನು ಮನರಂಜನೆಯನ್ನಾಗಿ ನೋಡಿ. ದೇಶದಲ್ಲಿ ನಿಮ್ಮ ವಿಷಕಾರಿ ಅಜೆಂಡಾವನ್ನು ಪ್ರಸಾರ ಮಾಡಲು ಸಾಹಿತ್ಯ ಹಾಗೂ ಸಿನಿಮಾವನ್ನು ಬಳಸಬೇಡಿ’ ಎಂದಿದ್ದಾರೆ. ಪ. ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ರಾಜ್ಯದಲ್ಲಿ ಚಿತ್ರವನ್ನು ನಿಷೇಧಿಸಿ ಭಾನುವಾರ ಆದೇಶ ಹೊರಡಿಸಿದ್ದರು.

ಮಮತಾಗೆ ವಿವೇಕ್‌ ಅಗ್ನಿಹೋತ್ರಿ ಲೀಗಲ್‌ ನೋಟಿಸ್‌

ಇನ್ನೊಂದೆಡೆ ‘ದಿ ಕಾಶ್ಮೀರ್‌ ಫೈಲ್ಸ್‌’ ಚಿತ್ರದ ನಿರ್ದೇಶಕ ವಿವೇಕ್‌ ಅಗ್ನಿಹೋತ್ರಿ ಅವರು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರಿಗೆ ನೋಟಿಸ್‌ ಜಾರಿ ಮಾಡಿದ್ದಾರೆ. ಕಳೆದ ಶುಕ್ರವಾರ ಬಿಡುಗಡೆಯಾದ ‘ದಿ ಕೇರಳ ಸ್ಟೋರಿ’ ಚಿತ್ರಕ್ಕೆ ಬಂಗಾಳ ಸರ್ಕಾರ ನಿಷೇಧ ಹೇರಿ ಈ ಚಿತ್ರ ತಿರುಚಿದ ಕಥೆ ಹೊಂದಿದೆ, ಈ ಮೂಲಕ ದಕ್ಷಿಣದ ರಾಜ್ಯವನ್ನು ಅವಮಾನ ಮಾಡಲು ಹೊರಟಿದೆ ಎಂದು ಬ್ಯಾನರ್ಜಿ ಹೇಳಿದ್ದರು. ಈ ಹಿಂದೆ ಬಿಡುಗಡೆಯಾದ ದಿ ಕಾಶ್ಮೀರ್‌ ಫೈಲ್ಸ್‌ ಚಿತ್ರವು ಸುಳ್ಳುಗಳಿಂದ ಕೂಡಿತ್ತು. ಇದನ್ನು ನಿರ್ಮಾಣ ಮಾಡಲು ಬಿಜೆಪಿ ಬಂಡವಾಳ ಹೂಡಿದೆ ಎಂದು ಅವರು ಆಪಾದಿಸಿದ್ದರು. ಇದಕ್ಕೆ ಪ್ರತಿಯಾಗಿ ದಿ ಕಾಶ್ಮೀರ್‌ ಫೈಲ್ಸ್‌ ಚಿತ್ರ ನಿರ್ದೇಶಕ ವಿವೇಕ್‌ ಅಗ್ನಿಹೋತ್ರಿ ಅವರು ಮಮತಾಗೆ ಮಾನಹಾನಿ ಹಾಗೂ ತಪ್ಪು ಮಾಹಿತಿ ನೀಡಿದ್ದಾರೆ ಎಂದು ಲೀಗಲ್‌ ನೋಟಿಸ್‌ ಜಾರಿ ಮಾಡಿದ್ದಾರೆ.

The Kerala Story ಬ್ಯಾನ್​ ವಿಷ್ಯಕ್ಕೆ ನಟಿ ಶಬನಾ ಅಜ್ಮಿ ಹೇಳಿದ್ದೇನು?

ಬಂಗಾಳದಲ್ಲಿ ಕೇರಳ ಸ್ಟೋರಿ ನಿಷೇಧದ ವಿರುದ್ಧ ಶೀಘ್ರ ಸುಪ್ರೀಂಗೆ 

ಪಶ್ಚಿಮ ಬಂಗಾಳದಲ್ಲಿ ಚಿತ್ರದ ಮೇಲಿನ ನಿಷೇಧವನ್ನು ತೆಗೆದು ಹಾಕುವಂತೆ ಕೋರಿ ‘ದ ಕೇರಳ ಸ್ಟೋರಿ’ ಚಿತ್ರ ನಿರ್ಮಾಪಕ ವಿಫುಲ್‌ ಶಾ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಲಿದ್ದಾರೆ. ಅಲ್ಲದೇ ರಾಜ್ಯದಲ್ಲಿ ಚಿತ್ರ ಪ್ರದರ್ಶಿಸುವ ಥಿಯೇಟರ್‌ಗಳಿಗೆ ಭದ್ರತೆ ಒದಗಿಸುವಂತೆ ತಮಿಳುನಾಡು ಸರ್ಕಾರವನ್ನು ಕೋರಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಬಂಗಾಳದಲ್ಲಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಚಿತ್ರವನ್ನು ನಿಷೇಧಿಸಿದ ಬೆನ್ನಲ್ಲೇ ಇದರ ವಿರುದ್ಧ ಕಾನೂನಾತ್ಮಕವಾಗಿ ಹೋರಾಡುವುದಾಗಿ ವಿಫುಲ್‌ ತಿಳಿಸಿದ್ದರು. ತಮಿಳುನಾಡಿನ ಮಲ್ಟಿಪ್ಲೆಕ್ಸ್‌ಗಳಲ್ಲಿ ಸಿನಿಮಾ ಪ್ರದರ್ಶನಕ್ಕೆ ಪ್ರದರ್ಶಕರೇ ನಿರ್ಬಂಧ ವಿಧಿಸಿಕೊಂಡಿದ್ದಾರೆ.

ದಿ ಕೇರಳ ಸ್ಟೋರಿ ಉಚಿತ ಪ್ರದರ್ಶನ

ಬಿಗ್‌ಬಾಸ್‌ ಖ್ಯಾತಿಯ ಪ್ರಶಾಂತ್‌ ಸಂಬರ್ಗಿ ‘ದಿ ಕೇರಳ ಸ್ಟೋರಿ’ ಸಿನಿಮಾದ ಉಚಿತ ಪ್ರದರ್ಶನ ಆಯೋಜಿಸಿದ್ದಾರೆ. ಮೇ 11ರಂದು ಮಧ್ಯಾಹ್ನ 3.30ಕ್ಕೆ ಬೆಂಗಳೂರು ಕೋಣನ ಕುಂಟೆಯ ವಸಂತಪುರ ಮುಖ್ಯ ರಸ್ತೆಯಲ್ಲಿರುವ ಮಾನಸ ಥಿಯೇಟರ್‌ನಲ್ಲಿ ಚಿತ್ರ ಪ್ರದರ್ಶನ ಏರ್ಪಡಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ. ಈ ಥಿಯೇಟರ್‌ನಲ್ಲಿ 650 ಆಸನ ಸಾಮರ್ಥ್ಯವಿದ್ದು, ಮೊದಲು ಬಂದವರಿಗೆ ಆದ್ಯತೆ ಸಿಗಲಿದೆ.

ದಿ ಕೇರಳ ಸ್ಟೋರಿ ಬಲವಂತ ಮತಾಂತರದ ಜೊತೆಗೆ ಭಯೋತ್ಪಾದನೆಯ ನೈಜ ಸ್ಥಿತಿಯನ್ನೂ ಪ್ರತಿಬಿಂಬಿಸುತ್ತದೆ. ಕೇರಳದ ಮಹಿಳೆಯರನ್ನು ಬಲವಂತದಿಂದ ಮತಾಂತರ ಮಾಡಿ ಆ ಮೂಲಕ ಭಯೋತ್ಪಾದನೆಗೆ ತಳ್ಳುವ ಕುಕೃತ್ಯದ ಕುರಿತಾಗಿ ಚಿತ್ರದಲ್ಲಿ ವಿವರಿಸಲಾಗಿದೆ. ಈ ಚಿತ್ರವು ಕಣ್ಣು ತೆರೆಸುವಂತಿದೆ. ಕೇರಳದಲ್ಲಿ ನಡೆದದ್ದು ದೇಶದ ಎಲ್ಲಿ ಬೇಕಾದರೂ ನಡೆಯಬಹುದು. ನಾವು ಇದನ್ನು ತಡೆಯದಿದ್ದರೆ ಧರ್ಮದ ಹೆಸರಿನಲ್ಲಿ ನಡೆಯುವ ಉಗ್ರವಾದವನ್ನು ತಡೆಯಲು ಸಾಧ್ಯವಿಲ್ಲ. ಕೇರಳ ಸ್ಟೋರಿ ಚಿತ್ರ ನೈಜತೆಗೆ ಕನ್ನಡಿ ಹಿಡಿಯುವ ಜೊತೆಗೆ ಉತ್ತಮ ಸಂದೇಶವನ್ನೂ ನೀಡುತ್ತದೆ ಎಂದು ಸಂಬರ್ಗಿ ಹೇಳಿದ್ದಾರೆ.

Follow Us:
Download App:
  • android
  • ios