ಬಾಲಿವುಡ್ ಆ್ಯಕ್ಚನ್ ಕಿಂಗ್ ಅಕ್ಷಯ್ ಕುಮಾರ್ ಗೆ ಇಂದು 52 ನೇ ವರ್ಷದ ಸಂಭ್ರಮ. ಸಿನಿಮಾ ಸೆಲಬ್ರಿಟಿಗಳು, ನೆಟ್ಟಿಗರು ಸೇರಿ ಅಕ್ಕಿ ಬರ್ತಡೇಯನ್ನು ಇನ್ನಷ್ಟು ಚಂದಗಾಣಿಸಿದ್ದಾರೆ. 

ಈ ಸಂದರ್ಭದಲ್ಲಿ ಅಕ್ಷಯ್ ಕುಮಾರ್ ತಮ್ಮ ಮುಂದಿನ ಐತಿಹಾಸಿಕ ಸಿನಿಮಾದ ಬಗ್ಗೆ ಮಾತನಾಡಿದ್ದಾರೆ. ರಾಜ ಪೃಥ್ವಿರಾಜ್ ಚೌಹಾಣ್ ಆಧಾರಿತ ಸಿನಿಮಾವೊಂದನ್ನು ಮಾಡುತ್ತಿದ್ದಾರೆ. ಇದೊಂದು ಬಿಗ್ಗೆಸ್ಟ್ ಸಿನಿಮಾ ಎಂದಿದ್ದಾರೆ. 

ಹಾಲಿವುಡ್ ನಟನನ್ನು ಹಿಂದಿಕ್ಕಿದ ಅಕ್ಷಯ್; ವಿಶ್ವದ 4ನೇ ಶ್ರೀಮಂತ ನಟನ ಪಟ್ಟ!

‘ನನ್ನ ಹುಟ್ಟುಹಬ್ಬ ದಿನ ನನ್ನ ಮೊದಲ ಐತಿಹಾಸಿಕ ಸಿನಿಮಾ ಪೃಥ್ವಿರಾಜ್ ಚೌಹಾಣ್ ಮಾಡ್ತಾ ಇದ್ದೀನಿ ಎನ್ನುವುದಕ್ಕೆ ಖುಷಿಯಾಗುತ್ತಿದೆ. ಅಂತಹ ಮಹಾನ್ ವ್ಯಕ್ತಿಯ ಸಿನಿಮಾದಲ್ಲಿ ನಟಿಸುವುದು ನನ್ನ ಸೌಭಾಗ್ಯ’ ಎಂದು ಟ್ವೀಟ್ ಮಾಡಿದ್ದಾರೆ.

ಪ್ರಸಿದ್ಧ ಚಿತ್ರ ನಟ ಅಕ್ಷಯ್‌ ಕುಮಾರ್‌ ವಿಶ್ವದ 4ನೇ ಶ್ರೀಮಂತ ಸಿನಿಮಾ ನಟರಾಗಿ ಹೊರಹೊಮ್ಮಿದ್ದಾರೆ. 2018ರ ಜೂ.1ರಿಂದ 2019ರ ಜೂ.1ರವರೆಗೆ 460 ಕೋಟಿ ರು. ಗಳಿಸಿರುವ ಅಕ್ಷಯ್‌, ಹಾಲಿವುಡ್‌ನ ಪ್ರಸಿದ್ಧ ನಟ ಜಾಕಿ ಚಾನ್‌ಗಿಂತ ಒಂದು ಸ್ಥಾನ ಮೇಲಿದ್ದಾರೆ.

ವಿಶ್ವದ ಹೈಯೆಸ್ಟ್ ಪೇಯ್ಡ್ ನಟರಲ್ಲಿ ‘ಕೇಸರಿ’ ಹೀರೋ

ಅತಿ ಹೆಚ್ಚು ಸಂಭಾವನೆ ಪಡೆಯುವ ವಿಶ್ವದ ಸಿನಿಮಾ ನಟರ ಪಟ್ಟಿಯೊಂದನ್ನು ಫೋಬ್ಸ್‌ರ್‍ ಸಂಸ್ಥೆ ಸಿದ್ಧಪಡಿಸಿದ್ದು, ಅದರಲ್ಲಿ ಈ ಮಾಹಿತಿ ಇದೆ. ‘ದ ರಾಕ್‌’ ಖ್ಯಾತಿಯ ಹಾಲಿವುಡ್‌ ನಟ ಡ್ವೇಯ್‌್ನ ಜಾನ್ಸನ್‌ ಅವರು 640 ಕೋಟಿ ರು. ವಾರ್ಷಿಕ ಸಂಪಾದನೆಯೊಂದಿಗೆ ಪ್ರಥಮ ಸ್ಥಾನ ಪಡೆದಿದ್ದಾರೆ. ನಟರಾದ ಕ್ರಿಸ್‌ ಹೆಮ್ಸ್‌ವತ್‌ರ್‍ (550 ಕೋಟಿ ರು.), ರಾಬರ್ಟ್‌ ಡೌನಿ ಜೂನಿಯರ್‌ (474 ಕೋಟಿ ರು.) ನಂತರದ ಸ್ಥಾನಗಳನ್ನು ಪಡೆದಿದ್ದಾರೆ.

ಅಕ್ಷಯ್‌ ಕುಮಾರ್‌ ಅವರು ಪ್ರತಿ ಸಿನಿಮಾದಲ್ಲಿನ ನಟನೆಗೆ 35ರಿಂದ 70 ಕೋಟಿ ರು. ಪಡೆಯುತ್ತಾರೆ. ಟಾಟಾ ಹಾಗೂ ಹಾರ್ಪಿಕ್‌ ಸೇರಿದಂತೆ 20ಕ್ಕೂ ಹೆಚ್ಚು ಜಾಹೀರಾತುಗಳಲ್ಲಿ ಕಾಣಿಸಿಕೊಳ್ಳುವ ಮೂಲಕ ನೂರಾರು ಕೋಟಿ ರು. ದುಡಿಯುತ್ತಿದ್ದಾರೆ ಎಂದು ಫೋಬ್ಸ್‌ರ್‍ ಸಂಸ್ಥೆ ವರದಿ ಮಾಡಿದೆ.