ನಟ ಪುನೀತ್ ರಾಜ್ ಕುಮಾರ್ ಹಾಗೂ ಜಗ್ಗೇಶ್ ಹುಟ್ಟಹಬ್ಬಕ್ಕೆ ದರ್ಶನ್ ತಮ್ಮ ಟ್ವಿಟ್ಟರ್ ಹಾಗೂ ಫೇಸ್ ಬುಕ್ ನಲ್ಲಿ ಶುಭ ಕೋರಿದ್ದಾರೆ.
ಸ್ಯಾಂಡಲ್ ವುಡ್ ಪವರ್ ಫುಲ್ ಪಿಲ್ಲರ್ ಗಳಾದ ಪುನೀತ್ ರಾಜ್ ಕುಮಾರ್ ಹಾಗೂ ನವರಸ ನಾಯಕ ಜಗ್ಗೇಶ್ ಇಂದು(ಮಾರ್ಚ್ 17) ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ಈ ವೇಳೆ ದರ್ಶನ್ ತಮ್ಮ ಖಾತೆಯಲ್ಲಿ ಶುಭ ಕೋರಿ ಹಾರೈಸಿದ್ದಾರೆ.
‘ಹುಟ್ಟುಹಬ್ಬದ ಶುಭಾಶಯಗಳು ಪುನೀತ್, Cheers ’ ಎಂದು ಪುನೀತ್ ಗೆ ವಿಶ್ ಮಾಡಿ ‘ಹುಟ್ಟುಹಬ್ಬದ ಶುಭಾಶಯಗಳು ಜಗ್ಗಣ್ಣ, ಸದಾ ಕಾಲ ನಗುತ್ತಿರಿ, ಎಲ್ಲರನ್ನೂ ನಗಿಸುತ್ತಿರಿ ’ ಎಂದು ಬರೆದಿದ್ದಾರೆ.
ಹಿಂದೆ ದರ್ಶನ್ ಹುಟ್ಟುಹಬ್ಬಕ್ಕೆ ಪುನೀತ್ ಹಾಗೂ ಜಗ್ಗೇಶ್ ಕೋಡ ವಿಷ್ ಮಾಡಿದ್ದರು. ಇವರ ಬಾಂಧವ್ಯದ ಬಗ್ಗೆ ಹೇಳುವುದಾದರೆ ದರ್ಶನ್ ಸಿನಿಮಾಗಳಿಗೆ ಪವರ್ ಆ್ಯಕ್ಷನ್ ಕಟ್ ಹೇಳಿದ್ದಾರೆ. ಜಗ್ಗೇಶ್ ‘ಪ್ರೀಮಿಯರ್ ಪದ್ಮಿನಿ’ ಚಿತ್ರ ಟ್ರೈಲರ್ ನ್ನು ದರ್ಶನ್ ರಿಲೀಸ್ ಮಾಡಿದ್ದರು.
