ಪ್ರಗ್ನೆನ್ಸಿ ವಿಚಾರಕ್ಕೆ ಬಿಪಾಶ ಗರಂ!

Bipasha Basu Anger on Pregnency Gossip
Highlights

ಬಿಪಾಶ ಬಸುಗೂ ಗಾಸಿಪ್‌ಗಳಿಗೂ ಅದೇನು ನಂಟಿದೆಯೋ ಗೊತ್ತಿಲ್ಲ. ಒಂದಿಲ್ಲ ಒಂದು ಕಾರಣಕ್ಕೆ ಯಾವಾಗಲೂ ಸುದ್ದಿಯಾಗುತ್ತಲೇ ಇರುತ್ತಾರೆ.

ಬೆಂಗಳೂರು (ಜ.22): ಬಿಪಾಶ ಬಸುಗೂ ಗಾಸಿಪ್‌ಗಳಿಗೂ ಅದೇನು ನಂಟಿದೆಯೋ ಗೊತ್ತಿಲ್ಲ. ಒಂದಿಲ್ಲ ಒಂದು ಕಾರಣಕ್ಕೆ ಯಾವಾಗಲೂ ಸುದ್ದಿಯಾಗುತ್ತಲೇ ಇರುತ್ತಾರೆ.

ಮದುವೆಯಾದ ನಂತರ ಅವರು ಹೆಚ್ಚು ಸುದ್ದಿಯಾಗಿದ್ದು ಪ್ರಗ್ನೇನ್ಸಿ ವಿಚಾರಕ್ಕೆ. ಈಗ ಮತ್ತದೇ ವಿಚಾರಕ್ಕೆ ಬಿಪಾಶ ಸುದ್ದಿಯಾಗಿದ್ದಾರೆ. ಆದರೆ ಈ ಭಾರಿ ಭಿನ್ನ. ಅದೇಗೆ ಎಂದರೆ ಬಿಪಾಶ ಪ್ರಗ್ನೆಂಟ್ ಎನ್ನುವ ಸುದ್ದಿ ಹಬ್ಬಿಸಿದ್ದಕ್ಕೆ ಕೆಲವರ ವಿರುದ್ಧ ಟ್ಟಿಟ್ಟರ್‌ನಲ್ಲಿ ಗುಡುಗಿದ್ದಕ್ಕೆ. ‘ನಾನು ಸಹಜವಾಗಿಯೇ ಬ್ಯಾಗ್‌'ವೊಂದನ್ನು ಕೈಯಲ್ಲಿ ಹಿಡಿದು ಕಾರ್ ಒಳಗೆ ಕುಳಿತುಕೊಂಡೆ. ಇದನ್ನೇ ಕೆಲವರು ಬಿಪಾಶ  ಪ್ರಗ್ನೆಂಟ್ ಇರಬಹುದು. ಅದಕ್ಕೇ ಹೊಟ್ಟೆ ಮುಚ್ಚಿಕೊಳ್ಳಲು ಬ್ಯಾಗ್ ಅನ್ನು ಮರೆಮಾಡುತ್ತಿದ್ದಾಳೆ ಎಂದು ಸುಳ್ಳು ಸುದ್ದಿ ಹರಡಿದ್ದಾರೆ. ಇದರಿಂದ ನನಗೆ ತುಂಬಾ ಕಿರಿಕಿರಿಯಾಗಿದೆ. ನಾನು ಇನ್ನೂ ಗರ್ಭಿಣಿಯಾಗಿಲ್ಲ. ನಾನು ಮತ್ತು ಕರಣ್ ಸಿಂಗ್ ಗ್ರೋವೆರ್ ಇಷ್ಟ ಪಟ್ಟಾಗ ಮಾತ್ರ ನಾನು ಗರ್ಭಿಣಿಯಾಗುವುದು. ಆಗ ನಾನೇ ಸತ್ಯ ಹೇಳಿಕೊಳ್ಳುತ್ತೇನೆ’ ಎಂದು ಗುಡುಗಿದ್ದಾರೆ. ಇದರಿಂದ ಬಿಪಾಶ ಗರ್ಭಿಣಿ ಎನ್ನುವ ಸುದ್ದಿಗೆ ಖುದ್ದಾಗಿ ಉತ್ತರ ನೀಡಿದ್ದು ಎಲ್ಲಾ ಊಹಾಪೋಹಗಳಿಗೂ ತೆರೆ ಬಿದ್ದಿದೆ.

 

loader