ಬೆಂಗಳೂರು(ಸೆ.11): ಮೂರು ಸಿಸನ್'ಗಳ ಭರ್ಜರಿ ಯಶಸಿನ ನಂತರ ಈ ಬಿಗ್ ಬಾಸ್ ಸಿಸನ್ 4ಕ್ಕೆ ಭರ್ಜರಿ ತಯಾರಿ ನಡೆದಿದೆ. ಅಕ್ಟೋಬರ್ ನಲ್ಲಿ 'ಬಿಗ್ ಬಾಸ್ 4' ಪ್ರಸಾರ ಆರಂಭವಾಗಲಿದೆ ಎನ್ನಲಾಗಿದೆ. 

ಈ ಬಾರಿ ಕಲರ್ಸ್ ವಾಹಿನಿಯಲ್ಲೇ ರಿಯಾಲಿಟಿ ಶೋ ಪ್ರಸಾರವಾಗಲಿದ್ದು, ಕಿಚ್ಚ ಸುದೀಪ್ ಅವರೆ ಕಾರ್ಯಕ್ರಮ ನಡೆಸಿಕೊಂಡಲಿದ್ದಾರೆ. ಈಗಾಗಲೇ ಬಹುತೇಕ ತೆರೆಹಿಂದಿನ ಕೆಲಸಗಳು ಪೂರ್ಣಗೊಂಡಿದೆ ಎನ್ನುವ ಮಾತು ಕೇಳಿ ಬಂದಿದೆ. 

ಈಗಾಗಲೇ ಪ್ರೋಮೋ ಶೂಟ್ ಕೂಡ ಕಂಪ್ಲೀಟ್ ಆಗಿದ್ದು, 'ಬಿಗ್ ಬಾಸ್ ಕನ್ನಡ-4'ನಲ್ಲಿ ಯಾರೆಲ್ಲಾ ಸ್ಪರ್ಧಿಸಬೇಕು ಎಂಬ ಲೆಕ್ಕಾಚಾರ ಶುರುವಾಗಿದೆ. ಸುದೀಪ್ ಹೊಸ ಲುಕ್ ನಲ್ಲಿ ಮಿಂಚುತ್ತಿದ್ದಾರೆ.