ಬಿಗ್‌ಬಾಸ್ ಸೀಸನ್-5ನಲ್ಲಿ ಗಾಯಕಿ ಶ್ರುತಿ ಪ್ರಕಾಶ್ ಮೇಲೆ ಒಲವಿರುವುದಾಗಿ ಚಂದನ್ ಶೆಟ್ಟಿ ಒಮ್ಮೆ ಎಕ್ಸ್‌ಪ್ರೆಸ್ ಮಾಡಿದ್ದರು. ಆದರೆ, ಶ್ರುತಿಗೋ ಜೆಕೆ ಮೇಲೆ ಕಣ್ಣಿತ್ತು. ಆದರೆ, ಆ ಮನೆಯಿಂದ ಹೊರ ಬಂದ ಮೇಲೆ ಅಂಥ ಯಾವುದೇ ಸ್ಪೆಷಲ್ ಸುದ್ದಿಯೂ ಹೊರ ಬೀಳಲಿಲ್ಲ. ಇದೀಗ ನಡೆಯುತ್ತಿರುವ ಬಿಗ್‌ಬಾಸ್‌ ಮನೆಯಲ್ಲಿ ಮತ್ತೊಂದು ಲವ್ ಕಹಾನಿ ಆರಂಭವಾಗುವ ಲಕ್ಷಣಗಳಿವೆ.

ಒಬ್ಬರ ಮೇಲೆ ಮತ್ತೊಬ್ಬರಿಗೆ ಇರೋ ಪ್ರೀತಿಯನ್ನೇ ಎಕ್ಸ್‌ಪ್ರೆಸ್ ಮಾಡ್ಲಿಕ್ಕೆ ಬಿಗ್‌ಬಾಸ್‌ ಮನೆಯಲ್ಲಿ ಇರುತ್ತೆ ಟಾಸ್ಕ್. ಈ ಅವಕಾಶ ಸಿಕ್ಕಿದ್ದೇ ತಡ, ಉತ್ತರ ಕರ್ನಾಟಕದ ಬುಲೆಟ್ ರಾಣಿ ಸೋನು ಪಾಟೀಲ್ ನವೀನ್ ಸಜ್ಜು ಮೇಲಿರುವ ಪ್ರೀತಿಯನ್ನು ನವಿರಾಗಿ ಅಭಿವ್ಯಕ್ತಗೊಳಿಸಿದ್ದಾರೆ.
 
ಎಲ್ಲರೂ ತಮ್ಮ ಫಸ್ಟ್ ಕ್ರಶ್, ಕಳೆದುಕೊಂಡ ಪ್ರೀತಿ, ನೋವು-ನಲಿವಿನ ಸಂತಸದ ಕ್ಷಣಗಳನ್ನು ಹಂಚಿ ಕೊಳ್ಳುತ್ತಿದ್ದರು. ಸೋನು ಪಾಟೀಲ್ ತಮ್ಮ ಕೈಯಲ್ಲಿ ಎರಡು ಬಲೂನ್ ಹಿಡಿದು ಮನದಾಳದ ಮಾತನ್ನು ಹಂಚಿಕೊಂಡರು.

ಎರಡು ಬಲೂನ್‌ಗಳಲ್ಲಿ ಒಂದು ಅಜ್ಜಿ ಲಕ್ಷ್ಮಿ ಬಾಯಿ ಹೆಸರಲ್ಲಿ ಗಾಳಿಗೆ ತೂರಿ ಬಿಟ್ಟರು. ಮತ್ತೊಂದನ್ನು ನವೀನ್ ಸಜ್ಜುಗೆ ಕೊಟ್ಟು, ಹೇಳಿದ್ದು ಹೀಗೆ... 'ಇದುವರೆಗೆ ನನಗೆ ಎಂಟು ಮಂದಿ ಪ್ರಪೋಸ್ ಮಾಡಿದ್ದಾರೆ. ನಾಲ್ವರು ನನ್ನ ಹೆಸರನ್ನು ಅವರ ಎದೆ ಮೇಲೆ ಅಚ್ಚೆ ಹಾಕಿಸಿಕೊಂಡಿದ್ದಾರೆ. ಆದರೆ, ನನಗೆ ಮಾತ್ರ ನವೀನ್ ತುಂಬಾ ಇಷ್ಟ. ಅವನ ಗುಣ ಸೂಪರ್. ನಂಗೆ ಚಳಿ ಎಂದಾಗ ಅವರ ಪುಲ್‌‌ಓವರ್‌ ಅನ್ನೇ ಬಿಚ್ಚಿ ಕೊಟ್ಟರು. ಅವರು ಹೆಣ್ಣು ಮಕ್ಕಳನ್ನು ನೋಡೋ ರೀತಿ ನನಗಿಷ್ಟ. ..' ಎಂದು ಬಿಟ್ಟರು.