Asianet Suvarna News Asianet Suvarna News

ಬಿಗ್ ಬಾಸ್ ಲವ್ ಸ್ಟೋರಿಗೆ ಸಿಕ್ಕಿತು ಕ್ಲಾರಿಟಿ!

 

ಪ್ರತಿ ಬಿಗ್ ಬಾಸ್‌ನಲ್ಲಿಯೂ ಒಂದು ಜೋಡಿ ಹೈಲೈಟ್ ಆಗೋದು ಕಾಮನ್. ಈ ಬಿಗ್ ಬಾಸ್ ಮನೆಯಲ್ಲಿ ಅಕ್ಷತಾ-ರಾಕೇಶ್ ಜೋಡಿ ಬಗ್ಗೆ ಗುಸು ಗುಸು ಶುರುವಾಗಿದೆ. ಈ ಬಗ್ಗೆ ಈ ಜೋಡಿ ಹೇಳಿದ್ದೇನು?

Bigg boss season 6 MJ Rakesh and Akshitha clarify rumors
Author
Bengaluru, First Published Nov 10, 2018, 12:11 PM IST

ಬಿಗ್ ಬಾಸ್ ಮನೆಯಲ್ಲಿ ಎಲ್ಲಿ ನೋಡಿದರೂ ಕಣ್ಣಿಗೆ ಕಾಣಿಸುವ ಜೋಡಿ ರಾಕೇಶ್-ಅಕ್ಷತಾ! ಇವರಿಬ್ಬರ ನಡುವೆ ಏನೋ ನಡೀತಾ ಇದೆ..ಎಂದು ಗುಸು ಗುಸು ಆರಂಭವಾಗುತ್ತಿದ್ದಂತೆ, ಈ ಬಾಂಧವ್ಯಕ್ಕೊಂದು ಅವರೇ ಕ್ಲ್ಯಾರಿಟಿ ನೀಡಿದ್ದಾರೆ.

ದೀಪಾವಳಿ ಎಲ್ಲರ ಜೀವನದಲ್ಲಿ ಬೆಳಕು ತರುತ್ತದೆ. ಎಲ್ಲಾ ತಮ್ಮ ಮನೆ-ಮಂದಿಯನ್ನು ನೆನೆದು ಭಾವುಕರಾದರು. ಈ ನಡುವೆ ಈ ಜೋಡಿ ಬಗ್ಗೆ ಹರಿದಾಡುತ್ತಿರುವ ಸುದ್ದಿಗೂ ಸ್ಪಷ್ಟನೆ ನೀಡಿದೆ. ಮನೆಯಲ್ಲಿ ಹರಿದಾಡುತ್ತಿದ್ದ, ಗಾಸಿಪ್ ಕೇಳಿ ಕೇಳಿ ಸುಸ್ತಾದ ರಾಕೇಶ್ ಕೊನೆಗೂ ಬಾಯಿ ಬಿಟ್ಟಿದ್ದಾರೆ.

ಎಲ್ಲರ ಮುಂದೆಯೂ ತಾವಿಬ್ಬರೂ ಒಳ್ಳೆ ಫ್ರೆಂಡ್ಸ್ ಅಷ್ಟೇ, ನಡುವೆ ಏನೋ ಇಲ್ಲ ಎಲ್ಲರಿಗೂ ಒಬ್ಬೊಬ್ಬರು ಕ್ಲೋಸ್ ಇದ್ದಾರೆ. ಆದರೆ ನನಗೆ ಕ್ಲೋಸ್ ಇರುವುದು ಅಕ್ಷತಾ ಮಾತ್ರ. ಯಾಕೆ ನಿಮ್ಮೆಲ್ಲರ ಕಣ್ಣಲ್ಲಿ ಹುಡುಗ-ಹುಡುಗಿ ಫ್ರೆಂಡ್ಸ್ ಆಗಿರ್ಬಾದಾ? ಎಂದು ರಾಕೇಶ್ ಕಣ್ಣಿರಿಟ್ಟಿದ್ದಾರೆ.

ಅದಕ್ಕೆ ತಕ್ಷಣವೇ ಅಕ್ಷತಾ ಮಾತಾಡಿದ್ದಾರೆ ‘ಮನೆಯಲ್ಲಿ ಎಲ್ಲಾರಿಗೂ ಕಂಫರ್ಟ್ ಜೋನ್ ನೀಡೋ ಫ್ರೆಂಡ್ಸ್ ಇದ್ದಾರೆ. ಹಾಗೆ ನನಗೆ ರಾಕೇಶ್, ಅದಕ್ಕೆ ಸ್ವಲ್ಪ ಜಾಸ್ತಿ ಮಾತಾನಾಡುತ್ತಿನಿ’ ಎಂದರು. ಯಾರು ಮಾತನಾಡಿದರೂ ನಾನೂ ಕೇರ್ ಮಾಡುವುದಿಲ್ಲ. ಆದರೆ ಎಲ್ಲರಿಗೂ ಎಲ್ಲರ ಜೊತೆ ಬಾಂಡ್ ಇಟ್ಟುಕೊಳ್ಳೋಕೆ ಆಗೋದಿಲ್ಲ. ಅದಿಕ್ಕೆ ನಾನು ರಾಕೇಶ್ ಬೆಸ್ಟ್ ಫ್ರೆಂಡ್, 'ಐ ಲವ್ ಹಿಮ್', ರಾಕೇಶ್ ನೀನು ನಿಜವಾಗಿಯೂ ಒಳ್ಳೆಯ ಹುಡುಗ ಎಂದಿದ್ದಾರೆ.

Follow Us:
Download App:
  • android
  • ios