ಆ್ಯಂಡಿ ಮದುವೆ ಬಗ್ಗೆ ಹೇಳಬೇಕೆಂದರೆ ಆ್ಯಂಡಿ ಮನೆಯಿಂದ ಹೊರ ಬಂದಮೇಲೆ ಹುಡುಗಿಯನ್ನು ಹುಡುಕಿ ಮದುವೆ ನಿಶ್ಚಯ ಮಾಡುವುದಾಗಿ ಅವರ ತಂದೆ-ತಾಯಿ ನಿರ್ಧಾರ ಮಾಡಿದ್ದಾರೆ.

ಕೆಲ ತಿಂಗಳ ಹಿಂದೆ ಕವಿತಾನ ಕಂಡು ಆ್ಯಂಡಿ ‘ಮೈ ಜುಂ ಎನ್ನುತ್ತೆ’ ಎಂದೇಳಿ ಸ್ಟೇಟ್ ಮೆಂಟ್ ಪಾಸ್ ಮಾಡಿದ್ದರು. ಇದನ್ನ ಕಂಡು ಎಲ್ಲರೂ ಬಿಗ್ ಬಾಸ್ ಮನೆಯಲ್ಲೊಂದು ಲವ್ ಸ್ಟೋರಿ ಶುರುವಾಯಿತು ಅಂತ ಗುಸುಗುಸು ಶುರು ಮಾಡಿದ್ದರು. ಆದ್ರೆ ಇದೆಲ್ಲಾ ಗೇಮ್ ಪ್ಲ್ಯಾಮ್ ಆಗಿತ್ತು.

20 ಇಡ್ಲಿ, ಅರ್ಧ ಕೆಜಿ ಅನ್ನ ಕೇಳಿದ ಬಿಗ್ ಬಾಸ್ ಸ್ಪರ್ಧಿ!

ಸದ್ಯ 28 ವರ್ಷದ ಆ್ಯಂಡಿ ಕಾಮನ್ ಮ್ಯಾನ್ ಅಲ್ಲ. ಈಗಾಗಲೇ 15-20 ಸಿನಿಮಾಗಳಲ್ಲಿ ಸಣ್ಣಪುಟ್ಟ ಕಾಮಿಡಿ ಮಾಡಿಕೊಂಡು ಸಿನಿಮಾ ಕ್ಷೇತ್ರದಲ್ಲಿದ್ದಾರೆ. ಸಣ್ಣಪುಟ್ಟ ಪಾತ್ರ ಮಾಡುತ್ತಿದ್ದ ಆ್ಯಂಡಿಗೆ ಬಿಗ್ ಬಾಸ್ ಮನೆಯಿಂದ ಹೊರ ಬಂದ ಮೇಲೆ ದೊಡ್ಡ ಅವಕಾಶಗಳೇ ಕಾದು ನಿಂತಿದೆ ಎನ್ನಲಾಗಿದೆ. ಆ್ಯಂಡಿಗೆ ಸಿಕ್ಕಾಪಟ್ಟೆ ಫ್ಯಾನ್ಸ್ ಇದ್ದಾರೆ ಎನ್ನುವುದಕ್ಕೆ ಇಲ್ಲಿಯವರೆಗಿನ ವೋಟ್ ಗಳೇ ಸಾಕ್ಷಿ.

ಆ್ಯಂಡ್ರ್ಯೂಗೆ ಈಕೆ ಕಂಡರೆ ಮೈ ಜುಮ್ ಎನ್ನುತ್ತಂತೆ!

ಬಿಗ್ ಬಾಸ್ ಮನೆಯಲ್ಲಿ ಆ್ಯಂಡಿ ಭಾರೀ ಹವಾ ಸೃಷ್ಟಿಸಿದ್ದಾರೆ. ಈ ಸೀಸನ್ ನಲ್ಲಿ ಆ್ಯಂಡಿ ಇಲ್ಲದಿದ್ದರೆ ಫುಲ್ ಬೋರೋ ಬೋರು ಎಂದವರೂ ಇದ್ದಾರೆ. ಯಾಕ್ರಪ್ಪ ಇವನು ಇನ್ನು ಎಲಿಮಿನೆಟ್ ಆಗಿಲ್ಲ ಅಂತ ಮಾತಾಡುವವರು ಇದ್ದಾರೆ.