ಕಿಚ್ಚ ಸುದೀಪ್ ಮನೆಯೊಳಗೆ ಹೋಗಿದ್ದೆ ಸ್ಪರ್ಧಿಗಳು ಅವರನ್ನು ಮುತ್ತಿಕೊಂಡರು. ಸುದೀಪ್ ಅವರ ಜತೆ ಹರಟೆ ಹೊಡೆದರು. ಹಾಡು ಹೇಳಿದರು.

ಬಿಗ್‌ ಬಾಸ್ ನೀಡಿದ ಟಾಸ್ಕ್‌ನಂತೆ ಆ್ಯಂಡಿ , ಧನರಾಜ್ ಮತ್ತು ನವೀನ್ ಮಾಡಿದ್ದ ಅಡುಗೆಯನ್ನು ಕಿಚ್ಚ ಸವಿದರು. ಕೊನೆಯಲ್ಲಿ ಈ ಅಡುಗೆ ವಿವರವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳಲಾಗುತ್ತಿದ್ದು 3 ಲಕ್ಷ ರೂ. ಬಹುಮಾನ ಇದೆ ಎಂದು ಹೇಳಲಾಯಿತು. ಪ್ರತಿಯೊಬ್ಬರು ತಾವು ಮಾಡಿದ ಅಡುಗೆ ಹೊಗಳಿದ್ದಲ್ಲದೆ ಓಟ್ ಮಾಡುವಂತೆ ಮನವಿ ಮಾಡಿಕೊಂಡರು.

‘ಕ್ಯಾಮರಾ ಇದೆ ಅಂಥ ಜೀವನ ಮಾಡ್ತಿರೋರು ಒಳಗೆ ಇದ್ದಾರೆ’

ಫಿನಾಲೆ ಹಂತಕ್ಕೆ ಬಿಗ್ ಬಾಸ್ ಬಂದಿದೆ. ಕಿಚ್ಚ ಸುದೀಪ್ ಪ್ರತಿಯೊಬ್ಬರಿಗೂ ಒಂದೊಂದು ಪತ್ರ ಬರೆದಿಟ್ಟು ಮನೆಯಲ್ಲಿ ಯಾರಿಗೂ ಗೊತ್ತಾಗದ ರೀತಿ ಹೊರಕ್ಕೆ ಬಂದರು. ಸ್ಪರ್ಧಿಗಳು ಕಿಚ್ಚ ಸುದೀಪ್ ಹೇಳದೆ ಹೋಗಿದ್ದಕ್ಕೆ ನೊಂದುಕೊಂಡರು. ಆದರೆ ಪತ್ರ ನೋಡಿ ಖುಷಿ ಪಟ್ಟರು.