ಬಿಗ್‌ಬಾಸ್‌ ಮನೆಯಿಂದ ಆ್ಯಂಡಿ ಔಟ್? ತಂದೆಯೊಂದಿಗೆ ಹೊರನಡೆದ ಪುತ್ರ!

https://static.asianetnews.com/images/authors/56bf5dcb-7868-50e0-b2d0-38391a34809d.jpg
First Published 10, Jan 2019, 8:07 PM IST
bigg-boss-kannada-season-6-Day 80 Episode
Highlights

ಬಿಗ್‌ ಬಾಸ್ ಮನೆಯಿಂದ ಆ್ಯಂಡಿ ಔಟ್ ಆಗಿದ್ದಾರಾ? ಮನೆಯೊಳಕ್ಕೆ ಬಂದ ಆ್ಯಂಡಿ ತಂದೆ ತಮ್ಮ ಮಗನನ್ನು ಕರೆದುಕೊಂಡು ಹೊರಕ್ಕೆ ನಡೆದಿದ್ದಾರಾ? ಹೀಗೊಂದು ಪ್ರಶ್ನೆ ಇವತ್ತಿನ ಪ್ರೋಮೋ ನೋಡಿದಾಗ ಮೂಡುತ್ತಿದೆ.

ವಾರದ ಕತೆ ಕಿಚ್ಚನ ಜತೆ ಎಪಿಸೋಡ್‌ನಲ್ಲಿ ನಾಮಿನೇಶನ್‌ಗೆ ಗುರಿಯಾದವರು ಔಟ್ ಆಗುವುದು ವಾಡಿಕೆ. ಹಿಂದಿನ ಕೆಲ ಸೀಸನ್‌ಗಳಲ್ಲಿ ಮಧ್ಯರಾತ್ರಿ ಎಲಿಮಿನೇಶನ್ ಸಹ ನಡೆದಿದೆ. ಆದರೆ ಈ ಪ್ರೋಮೋ ಹೇಳುತ್ತಿರುವ ಕತೆಯೇ ಬೇರೆ.

ಆಂಡಿ ಮುಖಕ್ಕೆ ಬಾರಿಸಿದ ಕವಿತಾ ತಾಯಿ! ಇದೇನಿದು?

ಮನೆಯೊಳಕ್ಕೆ ಬಂದ ಆ್ಯಂಡಿ ತಂದೆ ಬಳಿ ಮನೆಯ ಸದಸ್ಯರು ವಿವಿಧ ದೂರುಗಳನ್ನು ಹೇಳಿದ್ದಾರೆ. ಇದಾದ ಮೇಲೆ ಆ್ಯಂಡಿ ತಂದೆ ನಿಮಗೆಲ್ಲ ನೋವು ಕೊಟ್ಟಿದ್ದಾನೆ ಅಂದ ಮೇಲೆ ಆತ ಮನೆಯಲ್ಲಿ ಇರುವುದಕ್ಕೆ ಅರ್ಹ ಅಲ್ಲ. ಈ ಕೂಡಲೇ ಕರೆದುಕೊಂಡು ಹೋಗುತ್ತೇನೆ ಎಂದು ಕೈ ಹಿಡಿದು ಎಳೆದುಕೊಂಡು ಹೋಗಿದ್ದಾರೆ.

ಕೈ ಹಿಡಿದು ಎಳೆದುಕೊಂಡು ಹೋಗಿರುವುದು ಮಾತ್ರ ಅಲ್ಲ. ಕ್ಯಾಮರಾ ಮುಂದೆ ಬಂದು ಬಿಗ್ ಬಾಸ್ ನನ್ನ ಮಗನನ್ನು ಹೊರಕ್ಕೆ ಕರೆದುಕೊಂಡು ಹೋಈಗುತ್ತಿರುವೆ ಎಂದು ಹೇಳಿದ್ದಾರೆ. ಒಟ್ಟಿನಲ್ಲಿ 80ನೇ ದಿನದ ಬಿಗ್‌ ಬಾಸ್ ಎಪಿಸೋಡ್‌ನಲ್ಲಿ ಯಾವ ಟ್ವಿಸ್ಟ್ ಇದೆಯೋ ಗೊತ್ತಿಲ್ಲ.

 


 

 

loader