ಬಿಗ್ ಬಾಸ್ ಮನೆಯಲ್ಲಿ ಎರಡನೇ ವಾರದ ಲಕ್ಸುರಿ ಬಜೆಟ್ ಟಾಸ್ಕ್ ಮುಗಿದಿದೆ. ನೀಲಿ ತಂಡ ಗೆದ್ದಿದ್ದು ನಾಯಕರ ಆಯ್ಕೆ ಪಟ್ಟಿಯಲ್ಲಿ ಅರ್ಹತೆ ಪಡೆದುಕೊಂಡಿದ್ದಾರೆ. ಊಟ, ಬಾತ್ ರೂಂ ಎಲ್ಲದಕ್ಕೂ ಕಿತ್ತಾಟವೇ ನಡೆದಿತ್ತು. ಅಡುಗೆ ಮಾಡಿದ ಆಹಾರಕ್ಕೂ ಬಿಗ್ ಬಾಸ್ ಆದೇಶ ಕಿತ್ತಾಟ ಮಾಡುವಂತೆ ಮಾಡಿತು. ಆದರೆ ಟಾಸ್ಕ್ ಮುಗಿದ ಮೇಲೆ ಮನೆಯ ಸದಸ್ಯರಿಗೆ ನೀಡಿದ ಬಿರುದು-ಬಾವಲಿಗಳು ಸಖತ್ ಮಜಾ ಕೊಟ್ಟವು.

ಎರಡನೇ ವಾರದ ಲಕ್ಸುರಿ ಬಜೆಟ್ ಟಾಸ್ಕ್ ಮುಗಿದಿದೆ. ಟಿಕೆಟ್ ಹರಿಯುವುದು ಮಾತ್ರ ನನ್ನ ಕೆಲಸವಾ? ನನಗೂ ಎಲ್ಲ ಗೊತ್ತಿದೆ ಎಂದು ಆನಂದ್ ಹೇಳಿದರೆ, ಆ್ಯಂಡಿ ಜತೆ ಗೆಳೆತನ ಮಾಡಬೇಡ ಎಂದು ಮುರಳಿ ಹೇಳಿದರು.

ಮನೆಯವರೆ ನೀಡಿದ ಬಿರುದುಗಳು ಮಾತ್ರ ಒಂದಕ್ಕಿಂತ ವಿಚಿತ್ರವಾಗಿದ್ದು ಬೋರ್ಡ್ ನ್ನು ಹಾಕಿಕೊಂಡೆ ಸುಸ್ತಾದ ಸ್ಪರ್ಧಿಗಳು ನಿದ್ರೆಗೆ ಜಾರಿದರು.

ಮೂರ್ಖ -ಕಂಡಕ್ಟರ್ ಆನಂದ್

ಅಳುಮುಂಜಿ-ರೀಮಾ

ವಿಷಸರ್ಪ-ರಶ್ಮಿ

ಸಮಯಸಾಧಕ, ಮಿತ್ರದ್ರೋಹಿ- ಆ್ಯಂಡಿ

ದಂಡಪಿಂಡ-ಮುರಳಿ

ಸ್ವಾರ್ಥಿ- ನವೀನ್‍

ನಕಲಿ-ಸ್ನೇಹಾ 

ಕುತಂತ್ರಿ- ಶಶಿ, ರಶ್ಮಿ

ಡ್ರಾಮಾ ಕ್ವೀನ್ - ಸ್ನೇಹಾ

ಸೋಮಾರಿ- ನಯನಾ

ಗೋಮುಖವ್ಯಾಘ್ರ-ರಶ್ಮಿ

ಕಿರಿಕಿರಿ-ಆ್ಯಂಡಿ

ಹೊಟ್ಟೆ ಕಿಚ್ಚಿನ ಮೊಟ್ಟೆ ಕೋಳಿ - ರಶ್ಮಿ

ನಿರುತ್ಸಾಹಿ- ಮುರಳಿ

ಗುಳ್ಳೆನರಿ-ಆ್ಯಂಡಿ ಮತ್ತು ರಶ್ಮಿ

ವಿಕೃತ ಮನಸ್ಸು-ಆ್ಯಂಡಿ

ಮುಂಗೋಪಿ- ರವಿ 

ತನಗೆ ಇಷ್ಟು ಬಿರುದುಗಳು ಸಿಕ್ಕಿರುವ ಬಗ್ಗೆ ರಶ್ಮಿ ಇಡೀ ಬನ್ನೇರುಘಟ್ಟ ನ್ಯಾಶನಲ್ ಪಾರ್ಕ್ ನ್ನೇ ನನ್ನ ಕೊರಳಿಗೆ ಹಾಕಿದ್ದಾರೆ ಎಂದು ವಿಶ್ಲೇಷಣೆ ಮಾಡಿದರು. ರಶ್ಮಿ ಮತ್ತು ಆ್ಯಂಡಿ ಮನೆಮಂದಿಯಿಂದ ಅತಿ ಹೆಚ್ಚು ಬಿರುದು ಪಡೆದುಕೊಂಡರು.