Asianet Suvarna News Asianet Suvarna News

ದೊಡ್ಡ ಮನೆಯ ಮೇಲೆ ಪ್ರೇಕ್ಷಕರಿಗೆ ಮೂಡಿದ ಬಿಗ್‌ ಅನುಮಾನ?

ಕನ್ನಡ ಬಿಗ್‌ ಬಾಸ್ ಮನೆ ಅರ್ಧ ಶತಕ ಪೂರೈಸಿ ಮುಂದಕ್ಕೆ ಸಾಗುತ್ತಿದೆ. ಮನೆಯಲ್ಲಿ 11 ಮಂದಿ ಉಳಿದುಕೊಂಡಿದ್ದಾರೆ. ಸೋನು ಪಾಟೀಲ್ ಸಹ ಮನೆಯಿಂದ ಹೊರಬಂದಿದ್ದಾರೆ.

bigg boss kannada season 6 Audience comments on Social Media
Author
Bengaluru, First Published Dec 9, 2018, 7:30 PM IST

 ‘ಹೆಚ್ಚು ಕಿರಿ ಕಿರಿ ಮಾಡದೆ ತಾನಾಯಿತು ತಮ್ಮ ಕೆಲಸ ಆಯ್ತು ಅಂತ ಇದ್ದ ಆನಂದ್. ಆದಂ.ಸೋನು ಅಂತವರನ್ನ ಹೊರಹಾಕಿ. ತಿಕಲು ತರ ಆಡೋ ಆಂಡಿ. ಸಭ್ಯತೆ ಮೀರಿ ವರ್ತನೆ ಮಾಡೋ ಅಕ್ಷತಾ ರಾಕೇಶ್ ಅಂತವ್ರನ್ನ ಯಾಕೆ ಉಳಿಸ್ಕೊತ ಇದ್ದೀರಾ ಅನ್ನೋದೇ ಅರ್ಥ ಆಗ್ತಿಲ್ಲ. ಇದನ್ನೆಲ್ಲ ನೋಡ್ತಿದ್ರೆ ಬಿಗ್ಬಾಸ್ ಶೋನೆ ಫೇಕ್ ಅನ್ನಿಸುತ್ತಿದೆ’ ಈ ಬಗೆಯ ಕಮೆಂಟ್‌ಗಳು ಸೋಶಿಯಲ್ ಮೀಡಿಯಾದಲ್ಲಿ ಬಂದಿವೆ.

ಕವಿತಾ ಗೌಡ ಆ ಒಂದು ಶಬ್ದ ಸಿಕ್ಕಾಪಟ್ಟೆ ವೈರಲ್.. ಬೇಕಿತ್ತಾ!

ಹಾಗಾದರೆ  ದೊಡ್ಡ ಮನೆಯಲ್ಲಿ ಆಗುತ್ತಿರುವುದು ಏನು? ಕ್ರಿಕೆಟ್ ಆಟಗಾರ್ತಿ ರಕ್ಷಿತಾ ರೈ, ರೀಮಾ, ಆ್ಯಡಂ ಪಾಶಾ, ಜಿಮ್ ರವಿ, ಬಿಎಂಟಿ ಕಂಡಕ್ಟರ್ ಆನಂದ್ ಇದೀಗ ಸೋನು ಪಾಟೀಲ್ರ ಹೊರ ಬಂದಿದ್ದಾರೆ.

ಮನೆಯಲ್ಲಿ ಸದಾ ಕಿರಿಕ್ ಮಾಡಿಕೊಳ್ಳುತ್ತ ಒಬ್ಬರ ಮೇಲೆ ಒಬ್ಬರು ಎಗರಾಡುತ್ತಿರುವ ಕವಿತಾ ಗೌಡ, ಆ್ಯಂಡಿ, ರಾಕೇಶ್  ಅಂಥವರು ಮನೆಯಲ್ಲಿ ಸುರಕ್ಷಿತವಾಗಿದ್ದಾರೆ. ಇದು ಹೇಗೆ ಎಂದು ಪ್ರಶ್ನೆ ಮಾಡಿದ್ದಾರೆ.?

 

 

 

Follow Us:
Download App:
  • android
  • ios