ಎರಡನೇ ವಾರ ಚಾಲ್ತಿಯಲ್ಲಿರುವ ಮನೆಯಲ್ಲಿ ಮುರುಳಿ ಒಬ್ಬರನ್ನು ಹೊರತುಪಡಿಸಿ ಉಳಿದವರು ತೆರೆದುಕೊಂಡಂತೆ ಕಾಣುತ್ತಿದೆ. ಗುರುವಾರ ನಡೆದ ಘಟನಾವಳಿಗಳಲ್ಲಿ ಅಕ್ಷತಾ ಪಾಂಡವಪುರ ಪುಲ್ ಮಾರ್ಕ್ಸ್ ಗಳಿಸಿಕೊಂಡರು.

ನಾಯಕತ್ವದ ರೆಸ್: ಬಾಗಿಲು ತೆರೆಯೇ ಶೇಷಮ್ಮ ಟಾಸ್ಕ್ ನಲ್ಲಿ ಚೆನ್ನಾಗಿ ಪ್ರದರ್ಶನ ನೀಡಿದ  ಆರ್ ಜೆ  ರಾಕೇಶ್, ನವೀನ್, ಧನರಾಜ್ ಮತ್ತು ಅಕ್ಷತಾ ಪಾಂಡವಪುರ ಅವರನ್ನು ಮನೆ ಮಂದಿ ನಾಯಕತ್ವಕ್ಕೆ ಆಯ್ಕೆ ಮಾಡಿದರು.

ಹೊಟ್ಟೆ ಕಿಚ್ಚಿನ ಕೋಳಿ, ವಿಷಸರ್ಪ- ಬನ್ನೇರುಘಟ್ಟದ ಪ್ರಾಣಿಗಳೆಲ್ಲ ರಶ್ಮಿ ಕೊರಳಲ್ಲಿ!

ಇಬ್ಬರಿಗೆ ಜೈಲು:  ಹಿಂದಿನ ಟಾಸ್ಕ್ ನಲ್ಲಿ ಕಳಪೆ ಪ್ರದರ್ಶನ ನೀಡಿದವರ ಎರಡು ಹೆಸರು ಸೂಚಿಸಲು ಬಿಗ್ ಬಾಸ್ ಕೇಳಿದರು. ಒಬ್ಬೊಬ್ಬ ಸದಸ್ಯರು ಹೆಸರು ಹೇಳುತ್ತಾ ಅದಕ್ಕೆ ಕಾರಣಗಳನ್ನೂ ನೀಡಿದರು. ಕವಿತಾ ಮತ್ತು ಸ್ನೇಹ ಅವರು ಕಳಪೆ ಪ್ರದರ್ಶನ ನೀಡಿದ್ದಾರೆ ಎಂದು ಅಂತಿಮ ತೀರ್ಮಾನಕ್ಕೆ ಬಂದು ಅವರಿಬ್ಬರು ಜೈಲು ಸೇರಬೇಕಾಯಿತು.

ಹುಡಿಯರನ್ನು ಯಾಕೆ ಮದುವೆ ಆಗಲ್ಲ? ಕಂಡಕ್ಟರ್ ಆನಂದ್ ಮತ್ತು ಸೋನು ಪಾಟೀಲ್ ಆ್ಯಡಂ ಮದುವೆ ವಿಚಾರ ಎತ್ತಿಕೊಂಡರು. ನೀವೇಕೆ ಮದುವೆಯಾಗಲ್ಲ? ಹುಡುಗಿರನ್ನು ಕಂಡರೆ ನಿಮಗೆ ಇಷ್ಟ ಇಲ್ಲ ಯಾಕೆ? ಎಂದು ತಲೆ ತಿಂದರು. 

ರಾಜ್ಯೋತ್ಸವ ಸಂಭ್ರಮ:  ಕನ್ನಡ ರಾಜ್ಯೋತ್ಸವದ ಪ್ರಯುಕ್ತ  ‘ಕನ್ನಡವೇ ಸತ್ಯ’ ಎಂಬ ವಿಶೇಷ ಟಾಸ್ಕನ್ನು ನೀಡಿ ನವೀನ್ ಸಾರಥ್ಯದಲ್ಲಿ ಒಂದು ಕನ್ನಡ ಹಾಡನ್ನು ರಚಿಸಲು ಬಿಗ್ ಬಾಸ್ ತಿಳಿಸಿದರು.

ಬಿಗ್ ಬಾಸ್ ಮನೆಯ ಇಂಚಿಂಚೂ ಕಥೆಗಳು

ಮನೆ ನಾಯಕನಿಗೆ ಮದುವೆ: ಆ್ಯಂಡಿಯನ್ನು ಕಡೆದ ಬಿಗ್ ಬಾಸ್ ನೀವು ರವಿಯನ್ನು ಕುಚೇಷ್ಟೆ ಮಾಡಬೇಕು. ಅಕ್ಷತಾ ಪಾಂಡವಪುರ ದೇಹದಲ್ಲಿ ದೆವ್ವ ಹೊಕ್ಕಿದಂತೆ ನಟಿಸಿ ಅಂತಿಮವಾಗಿ  ರವಿ ಮತಗ್ತು ಅಕ್ಷತಾ ಹಾರ ಬದಲಾಯಿಸಿಕೊಳ್ಳುವಂತೆ ಮಾಡಿದರೆ ವಿಶೇಷ ಉಡುಗೊರೆ ಸಿಗಲಿದೆ ಎಂದರು.

ಅಕ್ಷತಾ ಅವರ ನಾಟಕಕ್ಕೆ ರವಿ ಅವರು ದಂಗಾಗಿ ಹೋದರು. ಒಮ್ಮೆ ನಾರ್ಮಲ್ ಆಗಿರುತ್ತಿದ್ದ ಅಕ್ಷತಾ ಒಮ್ಮೆಲೆ ರೇಗಾಡುತ್ತಿದ್ದರು. ಹಿರಿಯ ಸ್ಪರ್ಧಿಗಳ ಮೇಲೆ ಏಕವಚನದ ದಾಳಿ ಒಂದೆರಡು ಜನರಿಗೆ ಸಿಕ್ಕ ಅವಕಾಶದಲ್ಲಿ ಏಟು ಸಹ ನೀಡಿದರು. ಅಮತಿಮವಾಗಿ ಟಾಸ್ಕ್ ಗೆದ್ದಿದ್ದಕ್ಕೆ ಬಿಗ್ ಬಾಸ್ ಕಡೆಯಿಂದ ಕೇಕ್ ದೊರೆಯಿತು.