ಬಿಗ್ ಬಾಸ್ ಮನೆಯೇ ವಿಚಿತ್ರ. ಇಲ್ಲಿ ಕಠಿಣ ಹೃದಯಿಗಳು ಎಂದು ಕೊಂಡವರ ಹೂವಿನಂಥ ಮನಸ್ಸು ಅನಾವರಣಗೊಳ್ಳುತ್ತದೆ. ಬಹಳ ಮೃದು ಸ್ವಭಾವದವರೆಂದುಕೊಂಡವರ ಕ್ರೌರ್ಯ ಪ್ರದರ್ಶಿತವಾಗುತ್ತದೆ. ಅಂಥ ಕಥೆ ಇಲ್ಲಿದೆ...

ದೀಪಾವಳಿಯಂದು ವಿಭಿನ್ನ ಟಾಸ್ಕ್ ಮೂಲಕ ಎಲ್ಲರನ್ನೂ ಪಾಲ್ಗೊಳ್ಳುವಂತೆ ಮಾಡಿದ ಬಿಗ್ ಬಾಸ್ ಕೊನೆಗೂ ಎಲ್ಲರಿಗೂ ಖುಷಿ ಕೊಡುವಂಥ ಕೆಲಸ ಮಾಡಿಸಿದ್ದಾರೆ. ಕೇವಲ ಸ್ವೀಟ್, ಟಾಸ್ಕ್ ಹಾಗೂ ಮನೆಯವರ ಪ್ರೀತಿ ಮಾತ್ರವಲ್ಲ, ಸ್ಪರ್ಧಿಗಳ ಮನೆ ಮಂದಿಯೂ ಈ ಟಾಸ್ಕ್‌ನಲ್ಲಿ ಪಾಲ್ಗೊಳ್ಳುವಂತೆ ಮಾಡಿದ್ದು ವಿಶೇಷ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಹೇಗಪ್ಪಾ ಅಂತ ಯೋಚನೆ ಮಾಡುತ್ತಿದ್ದೀರಾ? ಗಿಫ್ಟ್ ಮೂಲಕ. ಮನೆಯ ಸದಸ್ಯರಿಗೆ ಕೌಟುಂಬಿಕರು ಕಳುಹಿಸಿದ ಪತ್ರದ ಮೂಲಕ ಸ್ಪರ್ಧಿಗಳನ್ನು ಖುಷಪಡಿಸಲಾಗಿದೆ. ಮನೆಯಿಂದ ಬಂದ ಪತ್ರವನ್ನು ಓದಲಾಗುತ್ತದೆ. ಅದನ್ನು ಯಾರಿಗೆ ಬರೆದಿದ್ದಾರೆಂಬುವುದನ್ನು ಗುರುತಿಸಿದಾಗ ಗಿಫ್ಟ್ ಕಳುಹಿಸಲಾಗಿತ್ತು. ಹಾಗೆ ಬಂದ ಪತ್ರಗಳಲ್ಲಿ ಒಂದು ಮಾತ್ರ ವಿಭಿನ್ನವಾಗಿತ್ತು..! ಯಾರು? ಯಾರಿಗೆ ಬರೆದಿದ್ದು, ಓದಿ ಇಂಟರೆಸ್ಟಿಂಗ್ ಕಹಾನಿ.

ಯಾರಿಗಪ್ಪ ಇದು ಎಂದು ಓದಿ ನೋಡಿದರೆ ಮನೆ ಮಂದಿಗೆಲ್ಲಾ ಫುಲ್ ಕನ್ಫ್ಯೂಸೋ ಕನ್ಫ್ಸ್ಯೂಸ್. ಕವನದ ರೂಪದಲ್ಲಿದ್ದ ಪತ್ರ, ಸ್ನೇಹಾ-ನಯನ್‌ಗಿರಬಹುದಾ ಎಂಬ ಅನುಮಾನವಿತ್ತು. ಅದರಲ್ಲಿಯೂ ಶ್ರಾವಣ ಮಾಸವನ್ನು ಉಲ್ಲೇಖಿಸಿದ್ದರಿಂದ ಊಹಾಪೋಹಗಳು ಎಲ್ಲೆಲ್ಲೋ ಹೋಗಿತ್ತು. ಆದರೆ, ರವಿ ಮುಂದೆ ಹೋದರು.

ಹೌದು, ಅದು ಅವರಿಗೇ ಬಂದ ಪತ್ರ. ಓಪನ್ ಮಾಡಿದರೆ ಮಿಕ್ಕಿ ಮೌಸ್ ಗಿಫ್ಟ್! ಹೌದು. ಇದು ಅವರಿಗೆ ಮನೆಯಿಂದ ಹೆಂಡತಿ ಕಳುಹಿಸಿದ ಗಿಫ್ಟ್! ಅದೂ ಅವರ ಪತ್ನಿ ಬಾಡಿ ಬ್ಯುಲ್ಡರ್ ರವಿ ಅವರನ್ನು ಮದುವೆಯಾದಾಗ ತವರಿನಿಂದ ತಂದಿದ್ದ ಒಂದೇ ಒಂದು ವಸ್ತು! ಹುಟ್ಟುವ ಮಗಳಿಗೆಂದು ತಂದಿದ್ದು. ಒಂದು ರೀತಿ ವರದಕ್ಷಿಣೆ ಎನ್ನಬುಹುದು. ಬರೀ ಕಷ್ಟದಲ್ಲಿಯೇ ಬದುಕುತ್ತಿದ್ದ ರವಿ ಜೀವನದಲ್ಲಿ ಬಂದ ಅದೃಷ್ಟ ದೇವತೆ ಅವರ ಪತ್ನಿ. ಈ ಗೊಂಬೆ ಇವರಿಬ್ಬರೊಂದಿಗೆ ಸದಾ ಇರುತ್ತತ್ತಂತೆ.ಬಿಗ್‌ಬಾಸ್‌ ಮನೆಗೂ ಕಾಲಿಟ್ಟ ಈ ಪ್ರೀತಿಯ ಉಡುಗೊರೆಯನ್ನು ಜೋಪಾನವಾಗಿ ಕಾಪಾಡಿಕೊಳ್ಳುವುದು ರವಿ ಹೊಣೆ.