ಹಿಂದಿ ಬಿಗ್ ಬಾಸ್‌ ನಲ್ಲಿ  65 ವರ್ಷದ ಗುರು ಮತ್ತು 28 ವರ್ಷದ ಶಿಷ್ಯೆಯ ಇದೊಂಥರಾ ಪ್ರೇಮ್ ಕಹಾನಿ ಸಾಗಿರುವುದು ಗೊತ್ತೆ ಇದೆ. ಆದರೆ ಈ ನಡವೆ ಒಂದು ಸ್ಫೋಟಕ ಸುದ್ದಿಯೂ ಹೊರಬಿದ್ದಿದೆ. ಈ ಜೋಡಿಗೆ ಸಂಬಂಧಿಸಿದ ಆ ಸುದ್ದಿ ಯಾವುದು ಅಂತೀರಾ?

ಮುಂಬೈ[ಸೆ.17] ವಿಚಿತ್ರ ಜೋಡಿ ಹಾಗೂ ವಿಚಿತ್ರ ಘಟನೆಗಳಿಂದಲೇ ಸುದ್ದಿ ಮಾಡುವ ಹಿಂದಿ ಬಿಗ್ ಬಾಸ್ ನ 12ನೇ ಆವೃತ್ತಿ ಆರಂಭವಾಗಿದ್ದು, ಈ ಬಾರಿ ಗುರು - ಶಿಷ್ಯೆಯ ವಿಚಿತ್ರ ಜೋಡಿ ಎಂಟ್ರಿ ಕೊಟ್ಟಾಗಲೆ ಸುದ್ದಿ ಮಾಡಿತ್ತು.

28 ವರ್ಷದ ಜಸ್ಲೀನ್ ಮಥಾರು 65 ವರ್ಷದ ಅನೂಪ್ ಜಲೋಟರಿಂದ ಕಳೆದ ವರ್ಷ ಗರ್ಭಿಣಿಯಾಗಿದ್ದರು. ನಂತರದಲ್ಲಿ ಮಗುವನ್ನು ತೆಗೆಸಲಾಯಿತು ಎಂದು ವರದಿಯೊಂದು ಹೇಳುತ್ತಿದೆ.

ಬಿಗ್ ಬಾಸ್ ಮನೆಯಲ್ಲಿಯೂ ಸಹ ಗುರುವಿನ ಔಷಧ ಉಪಚಾರಗಳನ್ನು ಜಸ್ಲೀನ್ ನಿರ್ವಹಿಸಿಕೊಂಡೇ ಬರುತ್ತಿದ್ದಾರೆ. ಕಳೆದ 5 ವರ್ಷದಿಂದ ಇಬ್ಬರ ನಡುವೆ ಸಂಬಂಧ ಇದೆ. ಸ್ವತಃ ಜಸ್ಲೀನ್ ತಂದೆಯೇ ಮಗಳ ಬಗ್ಗೆ ಆತಂಕ ವ್ಯಕ್ತಪಡಿಸಿದ್ದ ಘಟನೆಯೂ ಆಗಿತ್ತು.