ಸಾಮ್ರಾಜ್ಯದ ಟಾಸ್ಕ್‌ ನಡೆಯುತ್ತಿದ್ದ ಸಂದರ್ಭದಲ್ಲಿ ಸಂಜನಾ ಮತ್ತು ಭುವನ್‌ನಡುವೆ ಪತ್ರದ ಕುರಿತಾಗಿ ಗೊಂದಲದಿಂದಾಗಿ ಇವರಿಬ್ಬರ ನಡುವೆ ಮನಸ್ತಾಪ ಏರ್ಪಟ್ಟಿತ್ತು. ಇದರಿಂದಾಗಿ ಜೋಡಿ ಮಾತನಾಡುವುದನ್ನೇ ನಿಲ್ಲಿಸಿತ್ತು.
ಬೆಂಗಳೂರು(ನ.04): ದಿನದಿಂದ ದಿನಕ್ಕೆ ರಂಗೇರುತ್ತಿರುವ ಬಿಗ್ ಬಾಸ್ ಮನೆಯಲ್ಲಿ ಗೂಡು ಕಟ್ಟುತ್ತಿರುವ ಹೊಸ ಪ್ರಣಯ ಪಕ್ಷಿಗಳಿಗೆ ಸದ್ಯ ವಿಹರ ವೇದನೆ ಕಾಡುತ್ತಿದೆ. ಟಾಸ್ಕ್ ವೊಂದರಲ್ಲಿ ಮುನಿಸಿಕೊಂಡ ಸಂಜನಾ ಮತ್ತು ಭುವನ್ ಜೋಡಿಯನ್ನು ಒಂದು ಮಾಡಲು ಮನೆಯ ಸದಸ್ಯರೇ ಮುಂದಾಗಿದ್ದಾರೆ.
ಸಾಮ್ರಾಜ್ಯದ ಟಾಸ್ಕ್ ನಡೆಯುತ್ತಿದ್ದ ಸಂದರ್ಭದಲ್ಲಿ ಸಂಜನಾ ಮತ್ತು ಭುವನ್ ನಡುವೆ ಪತ್ರದ ಕುರಿತಾಗಿ ಗೊಂದಲದಿಂದಾಗಿ ಇವರಿಬ್ಬರ ನಡುವೆ ಮನಸ್ತಾಪ ಏರ್ಪಟ್ಟಿತ್ತು. ಇದರಿಂದಾಗಿ ಜೋಡಿ ಮಾತನಾಡುವುದನ್ನೇ ನಿಲ್ಲಿಸಿತ್ತು.
ಈ ಘಟನೆಯಿಂದ ದೂರ-ದೂರ ಆಗಿದ್ದ ಭುವನ್ಸಂಜನಾ ಅವರನ್ನು ಮೊದಲು ರೇಗಿಸಿದ ಕೀರ್ತಿ, ಶಾಲಿನಿ ಮತ್ತು ಕಾವ್ಯಾ ಕಾಲೆಳೆದು ನಂತರ ಇಬ್ಬರು ಮಾತನಾಡಿ ಸಮಸ್ಯೆ ಬಗೆ ಹರಿಸಿಕೊಳ್ಳುವಂತೆ ಸಲಹೆ ನೀಡಿದ್ದಾರೆ. ಇದಕ್ಕಾಗಿಯೇ ಕಾಯುತ್ತಿದ್ದ ಈ ಜೋಡಿ ಮತ್ತೇ ಮಾತನಾಡಲು ಆರಂಭಿಸಿದ್ದಾರೆ.
