ಪ್ರತಿ ಬಾರಿ ಬಿಗ್ ಬಾಸ್ ನಲ್ಲಿ ಒಂದಲ್ಲ ಒಂದು ಲವ್ ಸ್ಟೋರಿಗಳು ಹುಟ್ಟಿಕೊಳ್ಳುತ್ತವೆ, ಆದರೆ ಈ ಬಾರಿ ಶುರುವಾಗಿ ಮೂರುದಿನವಾಗಿಲ್ಲ ಆಗಲೇ ಹೊಸದೊಂದು ಸ್ಟೋರಿ ಶುರುವಾಗಿದೆ.
ಬೆಂಗಳೂರು(ಅ.16): ಬಿಗ್ ಬಾಸ್ ನಾಲ್ಕನೇ ಆವೃತ್ತಿ ಶುರುವಾದ ನಂತರ ಮೊದಲ ಬಾರಿಗೆ 'ವಾರದ ಕಥೆ ಕಿಚ್ಚನ ಜೊತೆಯಲ್ಲಿ' ಕಾಣಿಸಿಕೊಂಡ ಕಿಚ್ಚ ಸುದೀಪ್ ಮೊದಲ ಲವ್ ಸ್ಟೋರಿಯನ್ನು ಬಿಚ್ಚಿಟ್ಟಿದ್ದಾರೆ.
ಪ್ರತಿ ಬಾರಿ ಬಿಗ್ ಬಾಸ್ ನಲ್ಲಿ ಒಂದಲ್ಲ ಒಂದು ಲವ್ ಸ್ಟೋರಿಗಳು ಹುಟ್ಟಿಕೊಳ್ಳುತ್ತವೆ, ಆದರೆ ಈ ಬಾರಿ ಶುರುವಾಗಿ ಮೂರುದಿನವಾಗಿಲ್ಲ ಆಗಲೇ ಹೊಸದೊಂದು ಸ್ಟೋರಿ ಶುರುವಾಗಿದೆ.
ಬಿಗ್ ಬಾಸ್ ಮನೆಯಲ್ಲಿ ಸಂಜನಾ ಮತ್ತು ಭುವನ್ ನಡುವಿನ ಕೆಮಿಸ್ಟ್ರಿ ಬಗ್ಗೆ ಕಿಚ್ಚ ಕಿಚ್ಚು ಹೆಚ್ಚಿಸಿದ್ದು, ಮನೆ ಮಂದಿಯೊಂದಿಗೆ ಸಂಜನಾ ಮತ್ತು ಭುವನ್ ನಡುವಿನ ಸಂಬಂಧದ ಕುರಿತು ಮಾತನಾಡಿದ್ದಾರೆ.
ಸಂಜನಾ ಮತ್ತು ಭುವನ್ ರಾತ್ರಿ ಮಲಗುವ ಸಂದರ್ಭದಲ್ಲಿ ಪಿಸು ಪಿಸು ಮಾತನಾಡುವುದನ್ನು ಗಮನಿಸಿದ ಕಿಚ್ಚ ಇಬ್ಬರ ಕಾಲು ಎಳೆದಿದ್ದಾರೆ.