ಮೊದಲ ಬಾರಿಗೆ ಯೂನಿಕ್ ವಿಚಾರವೊಂದನ್ನು ಹಿಡಿದು ನಿರೂಪಕನಾಗಿ ಕಿರುತೆರೆಯಲ್ಲಿ ಬಿಗ್ ಬಾಸ್ ಆಂಡ್ರೂ ಜಯಪಾಲ್, ಪ್ರತಿಯೊಂದು ದಿನ ಒಬ್ಬೊಬ್ಬರ ಮನೆಗೆ ತೆರಳಿ ಅವರ ಮನೆ ಖರ್ಚು -ವೆಚ್ಚದ ಬಿಲ್ ಪಡೆದು ಆ ನಂತರ ಅವರಿಗೆಲ್ಲಾ ಕೆಲವೊಂದು ಪ್ರಶ್ನೆ ಕೇಳುತ್ತಾರೆ. ಪ್ರತಿಯೊಂದು ಪ್ರಶ್ನೆಗೆ ಸರಿ ಉತ್ತರ ಕೊಟ್ಟವರಿಗೆ ಒಂದಷ್ಟು ಹಣವನ್ನು ನೀಡಲಾಗುತ್ತದೆ. ಈ ಕಾರ್ಯಕ್ರಮ ಉದಯ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದು ಇದರಲ್ಲಿ ನಿಮ್ಮ ಕುಟುಂಬದವರು ಭಾಗವಹಿಸಬಹುದು.

ಈ ಹಿಂದೆ ಬಿಗ್ ಬಾಸ್ ಸೀಸನ್- 6 ರಲ್ಲಿ ಫುಲ್ ಟೈಂ ಎಂಟರ್ಟೇನ್ ನೀಡುತ್ತಿದ್ದ ಸ್ಪರ್ಧಿ ಆಂಡ್ರೂ ಒಂದೊತ್ತಿಗೆ 2೦ ಇಡ್ಲಿ ಅರ್ಧ ಕೆಜಿ ಅನ್ನ ಸೇವಿಸುವರು. ಆಂಡ್ರೂ ಈ ಶೋಗೆ ನಿರೂಪಕನಾಗಿರುವುದು ಸಾರ್ಥಕ!