ಬಿಗ್ ಬಾಸ್ ಬ್ರೇಕಿಂಗ್ : ಕಾರ್ಯಕ್ರಮದಲ್ಲಿ ಮತ್ತೊಂದು ಹೊಸ ಬದಲಾವಣೆ

https://static.asianetnews.com/images/authors/56bf5dcb-7868-50e0-b2d0-38391a34809d.jpg
First Published 7, Sep 2018, 1:53 PM IST
Bigg Boss 12: Salman Khan's show timing changed
Highlights

ಬಿಗ್ ಬಾಸ್ ಮನೆಯನ್ನು ಇದೇ ಮೊದಲ ಬಾರಿಗೆ ಮುಂಬೈನಿಂದ ಗೋವಾಕ್ಕೆ ಸ್ಥಳಾಂತರಿಸಲಾಗಿದೆ.ಎಂದಿನಂತೆ 12ನೇ ಆವೃತ್ತಿಯನ್ನು ಬಾಲಿವುಡ್ ನಟ ಸಲ್ಮಾನ್ ಖಾನ್ ಆಯೋಜಿಸಿ ಕೊಡಲಿದ್ದಾರೆ.

ಮುಂಬೈ[ಸೆ.07]: ಹಿಂದಿಯ ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ 12ನೇ ಆವೃತ್ತಿಯಲ್ಲಿ ಮತ್ತೊಂದು ಹೊಸ ಬದಲಾವಣೆ ಉಂಟಾಗಲಿದೆ. 

ಸೆ.16 ರಂದು ಶೋ ಉದ್ಘಾಟನೆಗೊಳ್ಳಲಿದ್ದು ಪ್ರಸಾರದ ಸಮಯವನ್ನು ಕಾರ್ಯಕ್ರಮದ ಆಯೋಜಕರು ಬದಲಾಯಿಸಿದ್ದಾರೆ. ಕಳೆದ ಕೆಲವು ಸಂಚಿಕೆಗಳಿಂದ ನಿತ್ಯ ರಾತ್ರಿ 10.30 ಕ್ಕೆ ಪ್ರಸಾರವಾಗುತ್ತಿದ್ದ ಕಾರ್ಯಕ್ರಮ ರಾತ್ರಿ 9 ಗಂಟೆಗೆ ಆರಂಭಗೊಳ್ಳಲಿದೆ. 

ಆರಂಭದ ಕೆಲವು ಆವೃತ್ತಿಗಳು ರಾತ್ರಿ 9 ಗಂಟೆಗೆ ಪ್ರಸಾರವಾಗುತ್ತಿತ್ತು ಅನಂತರ ರಾತ್ರಿ 10.30ಕ್ಕೆ ಬದಲಾಯಿಸಲಾಗಿತ್ತು. ಬಿಗ್ ಬಾಸ್ ಮನೆಯನ್ನು ಇದೇ ಮೊದಲ ಬಾರಿಗೆ ಮುಂಬೈನಿಂದ ಗೋವಾಕ್ಕೆ ಸ್ಥಳಾಂತರಿಸಲಾಗಿದೆ.ಎಂದಿನಂತೆ 12ನೇ ಆವೃತ್ತಿಯನ್ನು ಬಾಲಿವುಡ್ ನಟ ಸಲ್ಮಾನ್ ಖಾನ್ ಆಯೋಜಿಸಿ ಕೊಡಲಿದ್ದಾರೆ.  ಹಿಂದಿನ ಆವೃತ್ತಿಗಳೆಲ್ಲ ಮುಂಬೈನ ಲೋನಾವಾಲದಲ್ಲಿ ನಡೆಯುತ್ತಿತ್ತು.

ಸೆಪ್ಟೆಂಬರ್ ನ 2ನೇ ವಾರದಲ್ಲಿ ಶೋ ಆರಂಭಗೊಳ್ಳಲಿದ್ದು ಹೊಸ ಆವೃತ್ತಿಗೆ ವಿಚಿತ್ರ ಜೋಡಿ ಎಂದು ಹೆಸರಿಡಲಾಗಿದೆ.  ಸ್ಪರ್ಧೆಗೆ ಪಾಲ್ಗೊಳ್ಳುವುವವರು ಒಬ್ಬರಿಗೊಬ್ಬರು ಸಂಬಂಧಿಸಿದವರೆ ಆಗಿರುತ್ತಾರೆ. ತಂದೆ ಮಗ, ತಾಯಿ ಮಗಳು, ಅಣ್ಣ ತಂಗಿ, ವಿಚ್ಚೇದಿತ ದಂಪತಿ, ಸ್ನೇಹಿತರು ಮುಂತಾದವರು ಭಾಗವಹಿಸುತ್ತಾರೆ. ಈಗಾಗಲೇ ತಮಿಳು, ಮಲಯಾಳಂ ರಿಯಾಲಿಟಿ ಆರಂಭಗೊಂಡಿದ್ದು, ಕನ್ನಡದ 6ನೇ ಆವೃತ್ತಿ ಕೂಡ ಶೀಘ್ರದಲ್ಲಿಯೇ ಶುರುವಾಗಲಿದೆ.

 

loader