ಗೆಲ್ಲುವ ಸ್ಪರ್ಧಿಗಳಾಗಿ ಪ್ರಥಮ್, ರೇಖಾ ಹಾಗೂ ಕೀರ್ತಿ ಈ ಮೂವರಲ್ಲಿ ಒಬ್ಬರು ಟ್ರೋಪಿ ಕೈಹಿಡಿಯಲಿದ್ದಾರೆ.
ಕನ್ನಡದ ಬಿಗ್'ಬಾಸ್ ಸೀಸನ್ 4ರ ಗ್ರ್ಯಾಂಡ್ ಫಿನಾಲೆ ಇಂದು ನಡೆಯಲಿದ್ದು ಗೆಲ್ಲುವ ಸ್ಪರ್ಧಿಗಳಾಗಿ ಪ್ರಥಮ್, ರೇಖಾ ಹಾಗೂ ಕೀರ್ತಿ ಈ ಮೂವರಲ್ಲಿ ಒಬ್ಬರು ಟ್ರೋಪಿ ಕೈಹಿಡಿಯಲಿದ್ದಾರೆ. ಅದೇ ರೀತಿ ಹಿಂದಿ ಬಿಗ್'ಬಾಸ್ ಸೀಸನ್-10ರ ಫಿನಾಲೆ ಕೂಡ ಇಂದೇ ನಡೆಯಲಿದ್ದು, ವಿಜೇತರಾಗಲು ಮನು ಪಂಜಾಬಿ, ವಿಜೆ ಬಾನಿ, ಲೋಪಮುದ್ರ ಹಾಗೂ ಮನ್'ವೀರ್ ಗುರ್ಜರ್ ಪೈಪೋಟಿ ನಡೆಸಲಿದ್ದಾರೆ.
ಈ ನಾಲ್ವರಲ್ಲಿ ವಿವಾದೀತ ಹಾಗೂ ಪ್ರಬಲ ಸ್ಪರ್ಧಿಯಂದರೆ ಮನು ಪಂಜಾಬಿ.ಈತ ನಮ್ಮಲ್ಲಿ ಪ್ರಥಮ ಇದ್ದಂಗೆ. ಹಿಂದಿ ಬಿಗ್ ಬಾಸ್ ನಾಲ್ವರು ಸ್ಪರ್ಧಿಗಳಿಗೆ ಸ್ಪರ್ಧೆಯಿಂದ ಹೊರಗೋಗಲು 10 ಲಕ್ಷ ರೂ. ಆಫರ್ ಮಾಡಿತ್ತು. ಆದರೆ 4 ಜನರಲ್ಲಿ ವಿಜೆ ಬಾನಿ, ಲೋಪಮುದ್ರ ಹಾಗೂ ಮನ್'ವೀರ್ ಗುರ್ಜರ್ ಬಿಗ್'ಬಾಸ್'ನ ಆಫರ್ ತಿರಸ್ಕರಿಸಿರು. ಆದರೆ ಮನು ಪಂಜಾಬಿ ಮಾತ್ರ 10 ಲಕ್ಷ ರೂ. ಆಫರ್ ಸ್ವೀಕರಿಸಿ ಸ್ಪರ್ಧೆಯಿಂದ ಔಟ್ ಆಗಿದ್ದಾನೆ ಎಂದು ಬಾಲಿವುಡ್'ಲೈಫ್.ಕಾಂ ವರದಿ ಮಾಡಿದೆ. ವಿಜೇತರನ್ನು ಸಲ್ಮಾನ್ ಖಾನ್ ಇಂದು ಆಯ್ಕೆ ಮಾಡಲಿದ್ದಾರೆ.
