ಬಿಗ್'ಬಾಸ್ ಸೀಸನ್ 4 ರ ಸ್ಪರ್ಧೆಯಲ್ಲಿ ಯಾರು ಗೆಲ್ಲುತ್ತಾರೆಂದು ಸುವರ್ಣ ವೆಬ್'ಸೈಟ್' ನ್ಯೂಸ್'ನಲ್ಲಿ ಸಮೀಕ್ಷೆ ಕೈಗೊಳ್ಳಲಾಗಿತ್ತು.
ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ರಿಯಾಲಿಟಿ ಕಾರ್ಯಕ್ರಮ ಬಿಗ್'ಬಾಸ್ ಸೀಸನ್ 4 ರ ಸ್ಪರ್ಧೆಯಲ್ಲಿ ಯಾರು ಗೆಲ್ಲುತ್ತಾರೆಂದು ಸುವರ್ಣ ವೆಬ್'ಸೈಟ್' ನ್ಯೂಸ್'ನಲ್ಲಿ ಸಮೀಕ್ಷೆ ಕೈಗೊಳ್ಳಲಾಗಿತ್ತು. ಸಮೀಕ್ಷೆಯಲ್ಲಿ ಒಟ್ಟು 2600 ಮಂದಿ ಪ್ರತಿಕ್ರಿಯೆ ನೀಡಿದ್ದು ಇದರಲ್ಲಿ ಪ್ರಥಮ್ ಗೆಲ್ಲಲ್ಲಿ ಎಂದು 1150 ಮಂದಿ ಹೇಳಿದರೆ, ರೇಖಾ ವಿಜೇತಳಾಗುತ್ತಾಳೆಂದು 650 ಮಂದಿಯ ಉತ್ತರವಾಗಿದೆ. 400 ಓದುಗರು ತಾವು ಕೀರ್ತಿಯ ಪರ ಇರುವೆವುವೆಂದರೆ ಇದು ತಮಗೆ ಸಂಬಂಧಪಟ್ಟಿರದ ವಿಷಯ ಎಂದು ಉಳಿದ 400 ಮಂದಿಯ ಪ್ರತಿಕ್ರಿಯೆಯಾಗಿದೆ. ಇನ್ನೊಂದು ವಿಷಯವೆಂದರೆ ಇಲ್ಲಿ ಎಲ್ಲಿಯೂ ಮಾಳವೀಕ ಗೆಲ್ಲುತ್ತಾಳೆಂದು ನೇರವಾಗಿ ಉತ್ತರಿಸದಿದ್ದರೂ ಫಲಿತಾಂಶ ಆಕೆಯ ಪರವಾಗಿ ವಾಲುವ ಸಾಧ್ಯತೆಯಿದೆ ಎಂಬುದು ಮತ್ತು ಕೆಲವರ ಅಭಿಪ್ರಾಯ. ಇದು ಕೇವಲ ಸಮೀಕ್ಷಾ ವರದಿಯಷ್ಟೆ ಹೊರತು ಬೇರೆ ಇನ್ನೇನಿಲ್ಲ. ಸ್ಪರ್ಧೆಯ ಫೈನಲ್ ವಿಜೇತರನ್ನು ಇನ್ನೆರಡು ದಿನದಲ್ಲಿ ಘೋಷಿಸಲಿದ್ದು ಭಾನುವಾರ ರಾತ್ರಿ ವಾಹಿನಿಯಲ್ಲಿ ಕಾರ್ಯಕ್ರಮ ಪ್ರಸಾರವಾಗಲಿದೆ.
