ಇಂದು ಕನ್ನಡ ರಾಜ್ಯೋತ್ಸವ. ಎಲ್ಲೆಲ್ಲೂ ಕನ್ನಡದ ಕಲರವ ಕೇಳಿ ಬರುತ್ತಿದೆ. ಕನ್ನಡ ನಮ್ಮ ಉಸಿರು, ಭಾಷೆ ಎಲ್ಲವೂ ಅನ್ನೋ ನಮ್ಮವರ ಮಧ್ಯೆ, ಕನ್ನಡವನ್ನೇ ನಾನಾ ರೀತಿ ಮಾತಾಡುವ ವಿಧಾನವೂ ಇದೆ. ಕಿರುತೆರೆಯ ಕನ್ನಡದ ದೊಡ್ಡ ರಿಯಾಲಿಟ್ ಶೋ ಬಿಗ್'ಬಾಸ್ ನಲ್ಲಿ ಹೊಸ ಕನ್ನಡ ಶುರುವಾಗಿದೆ. ಅದು ಡಬ್ ಸ್ಮಾಶ್ ಕಲಾವಿದೆ, ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟಿರುವ ನಿವೇದಿತಾ ಗೌಡಳ ಆಂಗ್ಲಮಯ ಕನ್ನಡ.
ಬೆಂಗಳೂರು (ನ.01): ಇಂದು ಕನ್ನಡ ರಾಜ್ಯೋತ್ಸವ. ಎಲ್ಲೆಲ್ಲೂ ಕನ್ನಡದ ಕಲರವ ಕೇಳಿ ಬರುತ್ತಿದೆ. ಕನ್ನಡ ನಮ್ಮ ಉಸಿರು, ಭಾಷೆ ಎಲ್ಲವೂ ಅನ್ನೋ ನಮ್ಮವರ ಮಧ್ಯೆ, ಕನ್ನಡವನ್ನೇ ನಾನಾ ರೀತಿ ಮಾತಾಡುವ ವಿಧಾನವೂ ಇದೆ. ಕಿರುತೆರೆಯ ಕನ್ನಡದ ದೊಡ್ಡ ರಿಯಾಲಿಟ್ ಶೋ ಬಿಗ್'ಬಾಸ್ ನಲ್ಲಿ ಹೊಸ ಕನ್ನಡ ಶುರುವಾಗಿದೆ. ಅದು ಡಬ್ ಸ್ಮಾಶ್ ಕಲಾವಿದೆ, ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟಿರುವ ನಿವೇದಿತಾ ಗೌಡಳ ಆಂಗ್ಲಮಯ ಕನ್ನಡ.
ಕನ್ನಡ ಚಿತ್ರಗಳ ಡೈಲಾಗ್'ಗಳನ್ನ ಡಬ್ ಸ್ಮಾಶ್ ಮಾಡೋ ಮೂಲಕ ಸಾಮಾಜಿಕ ಜಾಲಾತಾಣದಲ್ಲಿ ಪ್ರಸಿದ್ದಿಯಾಗಿದ್ದ ನಿವೇದಿತಾ ಗೌಡ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದಾಳೆ. ಇವಳು ಮಾತನಾಡುವ ಆಂಗ್ಲಮಯ ಕನ್ನಡ ಸಖತ್ ಸ್ಟೈಲಿಶ್ ಆಗಿದೆ. ನಿವೇದಿತಾ ಗೌಡಗೆ ಆಂಗ್ಲಮಯ ಕನ್ನಡ ಭಾಷೆ ಬಿಡೋದಕ್ಕೆ ಸಾದ್ಯವಾಗುತ್ತಿಲ್ಲವಾ? ನಿವೇದಿತಾ ಈ ಭಾಷೆ ಮಾತನಾಡುತ್ತಿದ್ದ ಹಾಗೆ ಒಂದು ಕ್ಷಣ ಕಿಚ್ಚ ಸುದೀಪ್ ಅವರೇ ಶಾಕ್ ಆಗಬಿಟ್ಟರು. ಸುದೀಪ್ ಗೆ ಶಾಕ್ ಕೊಟ್ಟ ಈ ಬಾಬಿ ಡಾರ್ಲ್ ನಿವೇದಿತಾ ಗೌಡ ಬಿಗ್ ಬಾಸ್ ಸ್ಪರ್ದಿಗಳಿಗೂ ಆಂಗ್ಲಮಯ ಕನ್ನಡ ಮಾತಾಡಿ ಮೋಡಿ ಮಾಡಿದ್ಲು. ಮನೆಯಲ್ಲಿರುವ ಸದ್ಯಸರು ಕೂಡ ಈಕೆಯ ಕನ್ನಡವನ್ನ ಮಾತನಾಡೋಕ್ಕೆ ಶುರು ಮಾಡಿದ್ರು. ಇವತ್ತಿನ ಯುವಕರ ಬಾಯಲ್ಲೂ ನಿವೇದಿತಾ ಆಂಗ್ಲಮಯ ಕನ್ನಡ ಕೇಳಿ ಬರುತ್ತಿದೆ. ಇತ್ತೀಚಿಗೆ ಬಿಗ್ ಬಾಸ್ ವಿಕೆಂಡ್ ಶೋ ನಲ್ಲಿ ಕಿಚ್ಚನ ಜೊತೆ ಟೈಗರ್ ಗಲ್ಲಿ ಚಿತ್ರತಂಡ ಪ್ರೋಮೊಷನ್ಗೆ ಭೇಟಿ ನೀಡಿತ್ತು, ಆಗ ನಟಿ ಪೂಜಾ ಲೋಕೇಶ್ ನಿವೇದೀತಾ ಕನ್ನಡ ಹೇಗಿರುತ್ತೆ ಅಂತ ತಾವು ಡಬ್ ಸ್ಮಾಶ್ ಮಾಡಿ ಖುಷಿ ಪಟ್ರು. ಸಖತ್ತಾಗೆ ಡೈಲಾಗ್ ಹೇಳಿದ್ರು.
ಈಕೆ ಬಿಗ್ ಬಾಸ್ಗೆ ಹೋದ್ಮೆಲೆ ಈಕೆಯ ಆಂಗ್ಲಮಯ ಕನ್ನಡ ಭಾಷೆಯನ್ನ ಬೇರೆಯವರು ಡಬ್ ಮಾಡೋಕ್ಕೆ ಶುರು ಮಾಡ್ಕೊಂಡಿದ್ದಾರೆ. ಸದ್ಯ ಡಬ್ ಸ್ಮಾಶ್ ಮಾಡ್ಕೊಂಡು ಹಾಯಾಗಿದ್ದ ನಿವೇದಿತಾ ತನ್ನ ಆಂಗ್ಲಮಯ ಕನ್ನಡ ಈಗ ಸಿಕ್ಕಾಪಟ್ಟೆ ಫೇಮಸ್ ಆಗಿಬಿಟ್ಟಿದೆ. ಇವತ್ತಿನ ಯುವಪಿಳಿಗೆ ಆಂಗ್ಲಮಯ ಕನ್ನಡ ಮಾತನಾಡಿ ಎಂಜಾಯ್ ಮಾಡ್ತಿದೆ. ಇನ್ನು ಕೆಲವರು ಈಕೆಯ ಆಂಗ್ಲಮಯ ಕನ್ನಡ ನೋಡಿ ತಲೆ ಚಚ್ಚಿಕೊಳ್ಳುತ್ತಿದ್ದಾರೆ. ಕನ್ನಡವೇ ನಮ್ಮಮ್ಮ ಅವಳಿಗೆ ಕೈ ಮುಗಿಯಮ್ಮ ಅಂತ ಈ ನಿವೇದಿತಾಳ ಕನ್ನಡ ನೋಡಿ ಕನ್ನಭಿಮಾನಿಗಳು ನಿನ್ನ ಕನ್ನಡ ನಿಲ್ಲಿಸಮ್ಮ ಅಂತ ಕೈಮುಗಿಯುತ್ತಿದ್ದಾರೆ.
