ಬಿಗ್'ಬಾಸ್ ಮತ್ತೊಬ್ಬರು ಪ್ರಬಲ ಸ್ಪರ್ಧಿ ಔಟ್, ಅಂತಿಮ ಕಣದಲ್ಲಿ ಐವರು !

Big Boss Kannada Session 5 Breaking news
Highlights

ಬಹುತೇಕರ ಅಭಿಪ್ರಾಯದಂತೆ ಜೆ.ಕೆ ಅಥವಾ ಚೆಂದನ್ ಶೆಟ್ಟಿ ಇಬ್ಬರಲ್ಲಿ ಒಬ್ಬರು ಗೆಲ್ಲಲಿದ್ದಾರಂತೆ. ಮತ್ತೂ ಕೆಲವರು ಸಮೀರ್ ಎಂದರೆ ದಿವಾಕರ್ ಕೂಡ ಜಯದ ನಗೆ ಬೀರಲಿದ್ದಾರೆ ಎನ್ನುತ್ತಿದ್ದಾರೆ ಹಲವರು.

ರಿಯಾಲಿಟಿ ಶೋ ಬಿಗ್'ಬಾಸ್ ಕನ್ನಡ 5ನೇ ಆವೃತ್ತಿಯ ಗ್ರ್ಯಾಂಡ್ ಫಿನಾಲೇ ಇನ್ನೇನು ಸಮೀಪಿಸುತ್ತಿದೆ. ಕಳೆದ ಶನಿವಾರ ಅನುಪಮ ಔಟಾಗಿ ಕಣದಲ್ಲಿ 6 ಮಂದಿ ಉಳಿದುಕೊಂಡಿದ್ದರು.

ಇತ್ತೀಚಿನ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ಮೂಲದಂತೆ ಸಮೀರ್ ಹೊರಗೋಗಿದ್ದು, ಟ್ರೋಫಿಗಾಗಿ ಜೆಕೆ,ಚಂದನ್ ಶೆಟ್ಟಿ,ಶೃತಿ, ದಿವಾಕರ್ ಹಾಗೂ ನಿವೇದಿತಾ ಗೌಡ ಸೆಣಸಾಡಲಿದ್ದಾರೆ. ಈಗಾಗಲೇ ಈ ಆವೃತ್ತಿಯ ಗೆಲುವಿನ ಪಟ್ಟ ಯಾರಿಗೆ ಎಂಬುದರ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಚರ್ಚೆಯಾಗುತ್ತಿದೆ.

ಬಹುತೇಕರ ಅಭಿಪ್ರಾಯದಂತೆ ಜೆ.ಕೆ ಅಥವಾ ಚೆಂದನ್ ಶೆಟ್ಟಿ ಇಬ್ಬರಲ್ಲಿ ಒಬ್ಬರು ಗೆಲ್ಲಲಿದ್ದಾರಂತೆ. ಮತ್ತೂ ಕೆಲವರು ಶೃತಿ ಎಂದರೆ ದಿವಾಕರ್ ಕೂಡ ಜಯದ ನಗೆ ಬೀರಲಿದ್ದಾರೆ ಎನ್ನುತ್ತಿದ್ದಾರೆ ಹಲವರು. ಕಳೆದ ಬಾರಿಯಂತೆ ಈ ಬಾರಿಯೂ ಅನಿರೀಕ್ಷಿತ ಫಲಿತಾಂಶ ಬರಲಿದ್ದು ಚಿನಕುರಳಿಯಂತೆ ಮಾತನಾಡುವ ನಿವೇದಿತಾ ಟ್ರೋಫಿ ಹಿಡಿಯಲಿದ್ದಾರೆ 'ಎನ್ನುತ್ತಾರೆ ಮತ್ತೊಂದು ಮೂಲ.      

loader